ಕುಶಾಲನಗರ, ಅ 22:
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಬೇಟೆಗಾರರನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರೆ, ಉಳಿದ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಉದ್ಯಾನವನದಂಚಿನ ಲಕ್ಷಿö್ಮಪುರ ನಿವಾಸಿಗಳಾದ ಅಶೋಕ, ಕಾಟಿಚಂದ್ರ ಬಂಧಿತರು.
ಘಟನೆ ವಿವರ :
ಅ.೧೫ರ ರಾತ್ರಿ ಉದ್ಯಾನದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿ ನಾಲ್ಕು ತೊಡೆಗಳು ಹಾಗೂ ಮಾಂಸವನ್ನು ಹೊತ್ತೊಯ್ದಿದ್ದರು. ಈ ಸಂಬAಧ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತಲಾಷ್ ನಡೆಸುತ್ತಿದ್ದರು.
ಆರೋಪಿಗಳ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ನರಗುಂದ, ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್.ಎಫ್.ಓ.ಗಳಾದ ರತನ್‌ಕುಮಾರ್. ಗಣರಾಜ ಪಟಗಾರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ ವೇಳೆ ಆನೆಚೌಕೂರು ವಲಯದಂಚಿನ ಲಕ್ಷಿö್ಮಪುರ ಗ್ರಾಮದಲ್ಲಿ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಮನು, ಬೊಮ್ಮ, ಭರತ್, ಆನಂದ್, ಶೇಷಮ್ಮನ ಜಯ, ರಾಮಕೃಷ್ಣೇಗೌಡ, ಮಂಜು ಪತ್ತೆಗೆ ತಂಡ ರಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹುಣಸೂರು ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿಗಳಾದ ರತನ್‌ಕುಮಾರ್. ಗಣರಾಜಪಟಗಾರ, ಡಿ.ಆರ್.ಎಫ್.ಓ ಗಳಾದ ಪ್ರಸನ್ನಕುಮಾರ್, ಎನ್.ಕೆ.ವೀರಭದ್ರ, ರಾಮು, ಮನೋಹರ್. ಅರಣ್ಯ ರಕ್ಷಕರಾಗಳಾದ ಲಾಲ್ ಮಹಮದ್, ಕೃಷ್ಣ, ಕುಶಲ್, ವಾಹನ ಚಾಲಕ ಶಿವು ಭಾಗವಹಿಸಿದ್ದರು.
Back to top button
error: Content is protected !!