ಟ್ರೆಂಡಿಂಗ್
Trending
ಕುಶಾಲನಗರದಲ್ಲಿ ಮಳೆ ಆರ್ಭಟ: ಬಡಾವಣೆ ಜಲಾವೃತ
ಉಕ್ಕಿದ ಹರಿದ ರೊಂಡಕೆರೆ: ಬಡಾವಣೆ ಜಲಾವೃತ: ಪ್ರಮುಖರಿಂದ ಪರಿಶೀಲನೆ
ಮಾದಾಪಟ್ಟಣ ವ್ಯಾಪ್ತಿಯ ರೊಂಡಕೆರೆ ಸೋಮವಾರ ಸುರಿದ ಭಾರೀ ಮಳೆಗೆ ಉಕ್ಕಿ ಹರಿದಿದೆ. ಇದರಿಂದಾಗಿ ಗೊಂದಿಬಸವನಹಳ್ಳಿಯ ತಗ್ಗು ಪ್ರದೇಶದ ಕಾರು ಚಾಲಕರು, ಮಾಲೀಕರ ಬಡಾವಣೆಗೆ ನೀರು ನುಗ್ಗಿದೆ. ಕೆಲವು ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಸ್ಥಳಕ್ಕೆ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್, ಜಿಲ್ಲಾ ಸಂಘದ ನಿರ್ದೇಶಕರಾದ ಟಿ.ಆರ್.ಪ್ರಭುದೇವ್, ನಗರ ಬಿಜೆಪಿ ಅಧ್ಯಕ್ಷರಾದ ವಿ.ಎನ್.ಉಮಾಶಂಕರ್, ಕುಡಾ ಸದಸ್ಯ ವೈಶಾಖ್, ಪತ್ರಕರ್ತರಾದ ಕೆ.ಕೆ.ನಾಗರಾಜಶೆಟ್ಟಿ, ಕೆ.ಎಸ್.ನಾಗೇಶ್, ವಾಸವಿ ಯುವಜನ ಸಂಘದ ಪ್ರವೀಣ್, ಬಿಜೆಪಿಯ ಆದರ್ಶ್ ಜೊತೆಯಲ್ಲಿದ್ದರು.