ಕುಶಾಲನಗರ, ಅ 09: ನಾಗರಹೊಳೆ ಉದ್ಯಾನದಂಚಿನ ಗುರುಪುರ ಬಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಾಜಿ ಗುರುಪುರದಲ್ಲಿ ತೆಂಗು,ಬಾಳೆ ಬೆಳೆ ಹಾಗೂ ಭತ್ತದ ಬೆಳೆ ತಿಂದು-ತುಳಿದು ನಾಶಪಡಿಸಿವೆ.
ಗ್ರಾಮದ ಮಹದೇವಶೆಟ್ಟಿರಿಗೆ ಸೇರಿದ ತೆಂಗು,ಬಾಳೆ ತೋಟಕ್ಕೆ ಲಗ್ಗೆ ಇಟ್ಟ ಎರಡು ಸಲಗಗಳು ಫಲಕ್ಕೆ ಬಂದಿದ್ದ ನೇಂದ್ರ ಬಾಳೆಯನ್ನು ನಾಶಪಡಿಸಿದ್ದು, ತೆಂಗಿನ ಗಿಡಗಳನ್ನು ಸಿಗಿದು ಹಾಕಿವೆ. ಇಷ್ಟೆ ಅಲ್ಲದೆ ಪಕ್ಕದ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿಯ ಶಿವಣ್ಣರಿಗೆ ಸೇರಿದ ಭತ್ತದ ಗದ್ದೆಯನ್ನು ತುಳಿದು ನಾಶಪಡಿಸಿದೆ. ಸ್ಥಳಕ್ಕೆ ವೀರನಹೊಸಹಳ್ಳಿ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.
ಸಲಗಗಳ ನಿತ್ಯದ ಕಾಟ:
ಈ ಭಾಗದಲ್ಲಂತೂ ನಿತ್ಯ ಎರಡು ಸಲಗಗಳ ಕಾಟ ವಿಪರೀತವಾಗಿದ್ದು, ರಾತ್ರಿಯಾಯಿತೆಂದರೆ ಉದ್ಯಾನದಿಂದ ಹೊರಬರುವ ಸಲಗಗಳು ಮಾಜಿ ಗುರುಪುರ, ಸರ್ವೆ ನಂ.೨೫. ಗುರುಪುರ, ಹುಣಸೇಕಟ್ಟೆ, ಭೀಮನಹಳ್ಳಿ, ಟಿಬೇಟ್ ಕಾಲೋನಿ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಜಮೀನಿಗೆ ದಾಳಿ ಇಟ್ಟು ಬೆಳೆ ನಾಶಪಡಿಸುತ್ತಿವೆ. ಇಷ್ಟೆಲ್ಲಾ ಅನಾಹುತವಾಗುತ್ತಿದ್ದರೂ ಸೂಕ್ತ ಬೆಳೆ ಪರಿಹಾರ ನೀಡಲ್ಲ. ರಾತ್ರಿ ವೇಳೆ ಸಿಬ್ಬಂದಿಗಳು ಕಾವಲು ಕಾಯುತ್ತಿಲ್ಲ.ಇನ್ನಾದರೂ ಈ ಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮವಾಗಬೇಕು., ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
Back to top button
error: Content is protected !!