ಕುಶಾಲನಗರ, ಸೆ 24: ಪ್ರೀತಿಸಿ ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ, ಅತಂತ್ರಕ್ಕೆ ಸಿಲುಕಿದ ಪತ್ನಿ, ತನಗೆ ನ್ಯಾಯ ಕೊಡಿಸುವಂತೆ ಪತಿ ಸೇರಿ 16 ಮಂದಿ ವಿರುದ್ದ ಯುವತಿ ದೂರು ದಾಖಲಿಸಿರುವ ಘಟನೆ ನಡೆಸಿದೆ.
ಚಿತ್ರದುರ್ಗ ಜಿಲ್ಲೆಯ ಪ.ಜಾತಿ ಸಮುದಾಯಕ್ಕೆ ಸೇರಿದ ಅಶ್ವಿನಿ ನತದೃಷ್ಟೆಯಾಗಿದ್ದು, ಈಕೆ ಪ್ರಿಯಕರ ಅಭಿಷೇಕ್ ಕುಟುಂಬದವರ ಒಪ್ಪಿಗೆ ಪಡೆದೇ ಮದುವೆಯಗಿದ್ದು, ಇದೀಗ ತನ್ನ ಪತಿ ಸೇರಿದಂತೆ ಇಡೀ ಕುಟುಂಬದವರು ಹಿಂಸೆ ನೀಡುತ್ತಿದ್ದಾರೆಂದು 16 ಮಂದಿ ವಿರುದ್ದ ದೂರು ನೀಡಿದ್ದಾಳೆ.
ಟಿಕ್ ಟಾಕ್‌ನಲ್ಲಿ ಆರಂಭವಾದ ಸ್ನೇಹದಿಂದ ಇಬ್ಬರೂ ಪ್ರೀತಿಸಿದ್ದರು. ಯುವತಿ ಅಶ್ವಿನಿ ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್‌ನನ್ನು ೨೦೨೧ ರ ಕೊರೊನಾ ವೇಳೆಯಲ್ಲಿ ದೇವಾಲಯವೊಂದರಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆದಿದ್ದು, ದಲಿತ ಸಮುದಾಯದ ಯುವತಿ ಎಂಬ ಕಾರಣಕ್ಕೆ ಮನೆಯಿಂದ ಹೊರ ಹಾಕಿದ್ದರು. ಸಹಿಸಿಕೊಂಡು ದನದ ಕೊಟ್ಟಿಗೆಯಲ್ಲಿ ಜೀವನ ನಡೆಸಿದ ಅಶ್ವಿನಿಯ ಅತ್ತೆ ಮಾವ ಗಂಡ ಇಲ್ಲದ ಸಮಯದಲ್ಲಿ ಅತ್ತೆ ಚಿಕ್ಕಮ್ಮ ಮಾವ ಸೊಸೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ಹೆತ್ತವರು ಹಾಗೂ ಸಂಬಂಧಿಕರ ಚಿತಾವಣೆಯಿಂದ ಪತಿರಾಯ ಕೈಕೊಟ್ಟಿದ್ದಾನೆ. ಇಷ್ಟೆ ಅಲ್ಲದೆ ಇಲ್ಲಸಲ್ಲದ ಚಾಡಿ ಹೇಳಿ ಅಶ್ವಿನಿಯ ಮೇಲೆ ಗಂಡ ಅಭಿಷೇಕ್ ಕೂಡ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.
ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ.ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಪ್ರಚಾರ ಮಾಡಿದ್ದಾರೆ. ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್‌ಗೆ ಮತ್ತೊಂದು ಮದುವೆಗೆ ಸಂಬಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ. ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಳಾಗಿದ್ದು, ಪ್ರೀತಿಸಿ ವಿವಾಹವಾದ ಜೋಡಿ ಒಂದು ವರ್ಷಕ್ಕೆ ಬೇರ್ಪಟ್ಟಿದೆ. ಪ್ರೀತಿಸಿ ಮದುವೆ ಆದ ಗಂಡನಿಗಾಗಿ ಅಶ್ವಿನಿ ಪೊಲೀಸ್ ಠಾಣೆ ನ್ಯಾಯ ದೊರೆಯಬೇಕಿದೆ.
Back to top button
error: Content is protected !!