ಟ್ರೆಂಡಿಂಗ್

ಮುಸ್ಲಿಂ ಕಪ್ ಫುಟ್ಬಾಲ್: ಅಲ್-ಅಮೀನ್ ಪಾಲಿಬೆಟ್ಟ ಚಾಂಪಿಯನ್ಸ್

ರೋಜಾರಿಯನ್ಸ್ ಗೋಣಿಕೊಪ್ಪ ತಂಡಕ್ಕೆ ದ್ವಿತೀಯ ಸ್ಥಾನ

ಕುಶಾಲನಗರ, ಮೇ 28: ತಾಜ್ ಯೂತ್ ಕ್ಲಬ್ ಕುಶಾಲನಗರ ಹಾಗೂ ಕೊಡಗು ಜಿಲ್ಲಾ‌ ಮುಸ್ಲಿಂ ಕಪ್ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಕುಶಾಲನಗರದ ಜಿ.ಎಂ.ಪಿ‌ ಶಾಲಾ ಮೈದಾನದಲ್ಲಿ ನಡೆದ 5ನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಲ್-ಅಮೀನ್ ಪಾಲಿಬೆಟ್ಟ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ದ್ವಿತೀಯ ಸ್ಥಾನವನ್ನು ರೋಜಾರಿಯನ್ಸ್ ಗೋಣಿಕೊಪ್ಪ ತಂಡವು ಪಡೆದುಕೊಂಡಿತ್ತು.

ಎರಡು ಬಲಿಷ್ಠ ತಂಡಗಳಾದ ಅಲ್-ಅಮೀನ್ ಪಾಲಿಬೆಟ್ಟ ಹಾಗೂ ರೋಜಾರಿಯನ್ಸ್ ಗೋಣಿಕೊಪ್ಪ ತಂಡಗಳ ನಡುವಿನ ಫೈನಲ್ ಪಂದ್ಯವು 20-20 ನಿಮಿಷಗಳಲ್ಲಿ ಮೊದಲಾರ್ಧದಲ್ಲಿ ಎರಡು ತಂಡವು ಸಮಬಲದ ಹೋರಾಟ ನಡೆಸಿತ್ತು.

ದ್ವಿತೀಯಾರ್ಧದಲ್ಲಿ ರೋಜಾರಿಯನ್ಸ್ ತಂಡವು ಆಕ್ರಮಣಕಾರಿ ಆಟಕ್ಕೆ ‌ಮುಂದಾಗಿ ತಂಡದ ಮುನ್ನಡೆ ಆಟಗಾರ ಸುಹೈಲ್ ಅವರ ಗೋಲುಬಾರಿಸುವುದರ ಮೂಲಕ 1-0 ಗೋಲುಗಳ ಅಂತರದಿಂದ ಮುನ್ನಡೆ ಪಡೆದಿತ್ತು.

ದ್ವಿತೀಯಾರ್ಧದ ಕೊನೆಯ ಮೂರು ನಿಮಿಷ ಬಾಕಿ ಉಳಿದಿರುವಾಗ ಅಲ್-ಅಮೀನ್ ತಂಡಕ್ಕೆ ಅದೃಷ್ಟ ಲಕ್ಷ್ಮಿಯಿಂತೆ ಫೀಲ್ಡ್ ನಲ್ಲಿ ಪೆನಾಲ್ಟಿ ಏರಿಯಾದಲ್ಲಿ ಎದುರಾಳಿ ತಂಡದ ಆಟಗಾರನ ಕೈ ಚೆಂಡು ತಾಗಿ ತೀರ್ಪುಗಾರರ ಪೆನಾಲ್ಟಿ ನೀಡಿತ್ತು.

ಅಲ್-ಅಮೀನ್ ತಂಡದ ಸ್ಟಾರ್ ಆಟಗಾರ ನಾಸಿಫ್ ತಮಗೆ ಸಿಕ್ಕ ಸುರ್ವಣವಕಾಶವನ್ನು ಸದ್ಬಳಕೆ ಮಾಡಿ,ಪೆನಾಲ್ಟಿ ಕಿಕ್ ಅನ್ನು ಗೋಲು ಬಾರಿಸುವುದರ ಮೂಲಕ ಕೊನೆಯ ಕ್ಷಣದಲ್ಲಿ ಸಮಬಲ ಸಾಧಿಸಿದರು.

ಎರಡು ತಂಡಗಳು 1-1 ಗೋಲುಗಳಿಸಿ ಸಮಬಲ ಸಾಧಿಸಿದ ಫೈನಲ್ ಪಂದ್ಯದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು.

ಪೆನಾಲ್ಟಿ ಶೂಟೌಟ್ ನಲ್ಲಿ ಅಲ್ ಅಮೀನ್ ತಂಡವು 4-3 ಗೋಲುಗಳ ಅಂತರದಿಂದ ರೋಜಾರಿಯನ್ಸ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು.

ಇದಕ್ಕೂ ಮೊದಲು ನಡೆದ ಮೊದಲನೆಯ ಸೆಮಿಫೈನಲ್ ಪಂದ್ಯವು ಅಲ್-ಅಮೀನ್ ಪಾಲಿಬೆಟ್ಟ ಹಾಗೂ ಅಮಿಟಿ ಯುನೈಟೆಡ್ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು.

ಅಲ್-ಅಮೀನ್ ಪಾಲಿಬೆಟ್ಟ ತಂಡವು ಅಮಿಟಿ ಯುನೈಟೆಡ್ ಗದ್ದೆಹಳ್ಳ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಕಳೆದ ವರ್ಷದ ಚಾಂಪಿಯನ್ ತಂಡ ಸಹರಾ ಹೊಳಮಾಳ ಹಾಗೂ ರೋಜಾರಿಯನ್ಸ್ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು.

ರೋಜಾರಿಯನ್ಸ್ ಗೋಣಿಕೊಪ್ಪ ತಂಡವು 2-0 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸತು.

ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅಮಿಟಿ ಯುನೈಟೆಡ್ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಸಹಾರ ತಂಡವನ್ನು ಮಣಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಕಳೆದ ಬಾರಿಯ ಚಾಂಪಿಯನ್ ತಂಡ ಸಹರಾ ಹೊಳಮಾಳ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಂದ್ಯಾವಳಿಯ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯು ಅಫೀಜ್,ಅತ್ಯುತ್ತಮ ಡಿಫೆಂಡರ್ ರೋಜಾರಿಯನ್ಸ್ ತಂಡದ ತನ್ವೀರ್ ಚಿನ್ನು,ಅತೀ ಹೆಚ್ಚು ಗೋಲುಬಾರಿಸಿದ ಆಟಗಾರ ಸಹರಾ ಹೊಳಮಾಳ ತಂಡದ ಜುನೈದ್,ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಅಲ್-ಅಮೀನ್ ಪಾಲಿಬೆಟ್ಟ ತಂಡದ ನಾಸಿಫ್ ,ಅತ್ಯುತ್ತಮ ಮುನ್ನಡೆ ಆಟಗಾರ ಅಲ್ -ಅಮೀನ್ ಪಾಲಿಬೆಟ್ಟ ತಂಡದ ಅನ್ಸಾರ್,ಬೆಸ್ಟ್ ಗೋಲ್ ಕೀಪರ್ ಹಫೀಜ್ ಅಮಿಟಿ ಯುನೈಟೆಡ್ ಗದ್ದೆಹಳ್ಳ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಹುಂಡಿ ತಂಡದ ಫಜೀಲ್ ಪಡೆದುಕೊಂಡರು.

ಪಂದ್ಯಾವಳಿಯ ತೀರ್ಪುಗಾರರಾಗಿ ದರ್ಶನ್ ಸುಕುಮಾರ್ ಮರಗೋಡು,ಅಭಿಷೇಕ್,ರಂಗ ಹಾಗೂ ಕಾರ್ತಿಕ್ ಕುಶಾಲನಗರ ಕಾರ್ಯನಿರ್ವಹಿಸಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಸಂಸ್ಥಾಪಕ ಆಸಿಫ್(ಆಪು)ಕೊಂಡಂಗೇರಿ, ತಯ್ಯೂಬ್ ಕೊಂಡಂಗೇರಿ,ಕುಶಾಲನಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಪುರಸಭೆ ಸದಸ್ಯ ಶೇಖ್ ಖಲೀಮುಲ್ಲ, ಪಂದ್ಯಾವಳಿ ಸಂಚಾಲಕ ಅಝರ್, ತಾಜ್ ಯುತ್ ಫ್ರೆಂಡ್ಸ್ ಅಧ್ಯಕ್ಷ ಮುಜೀಬ್, ಕಾಂಗ್ರೆಸ್ ಯುವ ನಾಯಕ ರಂಜನ್( ಹೆಬ್ಬಾಲೆ ರಂಜು), ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ, ಭಾಷಾ ರಾಯಲ್ ಬಿರಿಯಾನಿ, ಫುಟ್ಬಾಲ್ ಮಾಜಿ ಆಟಗಾರ ರಫೀಕ್, ಅಪೋಲೋ ಟೈಯರ್ ಮಾಲೀಕರಾದ ಅಮ್ಜದ್ ಪಾಷಾ, ಪತ್ರಕರ್ತ ಇಸ್ಮಾಯಿಲ್ ಕಂಡರೆ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!