
ಕುಶಾಲನಗರ, ಏ 16: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಜಲೀನಾ ಕೆ.ಹೆಚ್ ಎಂಬವವರು ದಿನಾಂಕ: 12-04-2024 ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂದಿಕರ ಮನೆಗೆ ತೆರಳಿದ್ದು, ದಿನಾಂಕ: 13-04-2024 ರಂದು ಸಂಜೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಬೀರುವಿನಲ್ಲಿದ್ದ ಅಂದಾಜು 232 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳ ಪತ್ತೆಯ ಸಲುವಾಗಿ ಮಹೇಶ್ ಕುಮಾರ್.ಎಸ್, ಡಿಎಸ್ಪಿ, ಮಡಿಕೇರಿ ಉಪವಿಭಾಗ, ಅರುಣ್.ಎಲ್, ಸಿಪಿಐ, ಮಡಿಕೇರಿ ಗ್ರಾಮಾಂತರ ವೃತ್ತ, ಶೋಭಾ ಲಮಾಣಿ. ಬಿ, ಪಿಎಸ್ಐ, ಭಾಗಮಂಡಲ ಪೊಲೀಸ್ ಠಾಣೆ, ಮಂಜುನಾಥ.ಈ, ಪಿಎಸ್ಐ, ನಾಪೋಕ್ಲು ಪೊಲೀಸ್ ಠಾಣೆ ಹಾಗೂ ಭಾಗಮಂಡಲ & ನಾಪೋಕ್ಲು ಪೊಲೀಸ್ ಠಾಣೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳು ಒಳಗೊಂಡ ವೃತ್ತ ಮಟ್ಟದ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 16-04-2024 ರಂದು 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಬಂಧಿತ ಆರೋಪಿಗಳ ವಿವರ:
1. ಮಿಡ್ಲಾಜ್. ಕೆ.ಕೆ. 22 ವರ್ಷ, ಅಯ್ಯಂಗೇರಿ ಗ್ರಾಮ, ಮಡಿಕೇರಿ ತಾಲ್ಲೂಕು.
2. ಫಾತೀಮಾ, 26 ವರ್ಷ, ಅಯ್ಯಂಗೇರಿ ಗ್ರಾಮ, ಮಡಿಕೇರಿ ತಾಲ್ಲೂಕು.
ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತುಗಳ ವಿವರ :
1. 177 ಗ್ರಾಂ ಚಿನ್ನಾಭರಣಗಳು
2. ಆರೋಪಿಗಳು ಕೃತ್ಯಕ್ಕೆ ಬಳಸಿದ ಒಂದು ದ್ವಿ-ಚಕ್ರ ವಾಹನ.
3. ಎರಡು ಮೊಬೈಲ್ಗಳು.
ಸದರಿ ಪ್ರಕರಣದ ಆರೋಪಿಗಳನ್ನು 48 ಗಂಟೆಗಳಲ್ಲಿ ಪತ್ತೆ ಹಚ್ಚಿ ಸಂಪೂರ್ಣ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
Back to top button
error: Content is protected !!