ಸಭೆ

ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ‌ ಮಹಾಸಭೆ

ಕುಶಾಲನಗರ, ಸೆ 23: ನಂ 38192ನೇ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ‌ ಮಹಾಸಭೆ ಸಂಘದ ಅಧ್ಯಕ್ಷರಾದ ಎಂ.ಎಂ.ಮಹಾದೇವರವರ ಅಧ್ಯಕ್ಷತೆಯಲ್ಲಿ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ‌ ನಡೆಯಿತು.
ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ‌ ವರದಿಯನ್ನು ಸಂಘದ ಸಿಇಒ ಎಚ್.ಎನ್.ಗಿರೀಶ್ ಓದಿ ದಾಖಲು‌ ಮಾಡಿದರು. ನಿವ್ವಳ ಲಾಭಗಳ‌ ವಿಲೇವಾರಿ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ಮುಂಬರುವ ವರ್ಷಕ್ಕಾಗಿ ತಯಾರಿಸಿದ ಸಂಘದ ಚಟುವಟಿಕೆಗಳ ಅನುಮೋದನೆ ಪಡೆಯಲಾಯಿತು. ಸಭೆಯ‌ ವರದಿಗಳನ್ನು ಸಮರ್ಪಕವಾಗಿ ದಾಖಲಿಸಲು ಸದಸ್ಯರು ಆಗ್ರಹಿಸಿದರು.
ಸಂಘದ ಮೂಲಕ ಸಮರ್ಕವಾಗಿ ರಸಗೊಬ್ಬರ ಪೂರೈಸಬೇಕು, ರಸಗೊಬ್ಬರಕ್ಕೆ ಹೆಚ್ಚಿನ‌ ದರ ಪಡೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು.
ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಮಹಾದೇವ, ಮಾಜಿ ಅಧ್ಯಕ್ಷ ಎಚ್.ಜೆ.ಪರಮೇಶ್, ಸಂಘದ ಹಿತದೃಷ್ಠಿಯಿಂದ ಸಣ್ಣ ಪ್ರಮಾಣದ ಲಾಭಾಂಶ ವಿಧಿ‌ಸಿ‌ ಮಾರಾಟ ಮಾಡಲಾಗುತ್ತಿದೆ ಎಂದರು. ರಸಗೊಬ್ಬರ ಡೀಲರ್ ಶಿಪ್ ಪಡೆದುಕೊಳ್ಳದ‌ ಕಾರಣ ಇತರೆ ಸಂಘಗಳಿಗೆ ದೊರಕುವ ಡಿಸ್ಕೌಂಟ್ ನಮ್ಮ ಸಂಘಕ್ಕೆ ಲಭಿಸುತ್ತಿಲ್ಲ ಎಂದು ಸಿಇಒ ಗಿರೀಶ್ ಸ್ಪಷ್ಟಪಡಿಸಿದರು. ಮುಂದಿನ‌ ದಿನಗಳಲ್ಲಿ ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸಂಘದ ಸದಸ್ಯರ ವಾಟ್ಸಾಪ್ ಗ್ರೂಪ್ ಮಾಡಿ ಸಂಘದಿಂದ ದೊರಕುವ ಸವಲತ್ತುಗಳ‌ ಬಗ್ಗೆ ಮಾಹಿತಿ ಒದಗಿಸಲು ಸಲಹೆ ಕೇಳಿಬಂತು.
ಸಂಘದ ನೂತನ ಕಛೇರಿ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಘದ ಸದಸ್ಯರನ್ನು ಗೌರವಯುತವಾಗಿ ಆಹ್ವಾನಿಸಿಲ್ಲ ಎಂದು ಸದಸ್ಯ‌ ಮಧುಸೂದನ್ ಆಕ್ರೋಷ ವ್ಯಕ್ತಪಡಿಸಿದರು. ಸಂಘದ ಸಿಇಒ ಸದಸ್ಯರ ಬಳಿ ಅಗೌರವವಾಗಿ ವರ್ತಿಸುತ್ತಾರೆ ಎಂಬ ಆರೋಪಗಳು‌ ಕೇಳಿಬಂದವು.
ಮರಣ ನಿಧಿ ಹೆಚ್ಚಳ, ನೂತನ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮ ಖರ್ಚು‌ ಮತ್ತಿತರ ವಿಷಯಗಳ‌ ಬಗ್ಗೆ ಚರ್ಚೆ ನಡೆಯಿತು.
ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ‌ ವಿತರಣೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಮಹದೇವ್, ಪ್ರಸಕ್ತ ಸಾಲಿನಲ್ಲಿ ಸಂಘ ರೂ 9,31,932.50 ನಿವ್ವಳ‌ ಲಾಭ ಗಳಿಸಿದೆ. ಸಂಘದ ಅಭಿವೃದ್ಧಿಗೆ ಸದಸ್ಯರ‌ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಚ್.ಆರ್.ಮಣಿಕಂಠ, ನಿರ್ದೇಶಕರಾದ ಎಚ್.ಸಿ.ಜಲೇಂದ್ರ, ಎಚ್.ಟಿ.ದಿನೇಶ್, ಎಚ್.ಕೆ.ಕವಿತಾ, ಎಚ್.ಜೆ.ಪರಮೇಶ್, ಎಚ್.ಟಿ.ಮೋಹನ್, ಎಚ್.ಎಲ್.ರವೀಂದ್ರ, ಎಂ.ಎಸ್.ಶಶಿಕಲಾ, ಎಚ್.ಜೆ.ಸ್ವಾಮಿ, ಎಚ್.ವಿ.ಸೋಮಶೇಖರ್, ಲೆಕ್ಕಿಗ ವಿನಯ್‌ ಮತ್ತು ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!