ಕುಶಾಲನಗರ, ಸೆ 23: ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಎಂಟು ವರ್ಷಗಳಿಂದ ಯಾವುದೇ ಹಗರಣಗಳಿಗೆ ಅವಕಾಶವಿಲ್ಲದಂತೆ ಹಾಗೂ ಸಮಾನತೆ ಆದಿಯಲ್ಲಿ ದೇಶವನ್ನು ಮುನ್ನಡೆಸುತ್ತಿದೆ ಎಂದು ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಮಹಿಳಾ ಅಧ್ಯಕ್ಷ ಮಂಗಳ ಸೋಮಶೇಖರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಪಿರಿಯಾಪಟ್ಟಣ ತಾಲೂಕು ಬಿಜೆಪಿ ಘಟಕದ ವತಿಯಿಂದ ಪಿರಿಯಾಪಟ್ಟಣ ತಾಲೂಕಿನ ಚೆನ್ನಕಾವಲು ಹಾಗೂ ಮರಡಿಯೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮಾಡಿ ಅವರು ಮಾತನಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಗೌಡ ಮಾತನಾಡಿ ಬಿಜೆಪಿ ಪಕ್ಷ ಬಡವರ ಹಾಗೂ ದೀನ ದಲಿತರ ಬಗ್ಗೆ ಕಾಳಜಿ ಹೊಂದಿರುವ ಪಕ್ಷವಾಗಿದೆ.
ದ್ರೌಪದಿ ಮುರ್ಮು ರಾಷ್ಟ್ರಪತಿ ಆದ ಮೇಲೆ ಕ್ಷಯ ರೋಗ ಮುಕ್ತಮಾಡುವ ಶಪಥವನ್ನು ಮಾಡಿದ್ದಾರೆ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ಒಬ್ಬ ಜನಪ್ರತಿನಿಧಿ ಕನಿಷ್ಠ ಇಬ್ಬರು ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸೂಚಿಸಿದೆ, ಅದರ ಮೇರೆಗೆ ಪಿರಿಯಪಟ್ಟಣ ತಾಲೂಕಿನಲ್ಲಿ ಇಬ್ಬರು ಕ್ಷಯ ರೋಗಿಗಳನ್ನು ಈಗಾಗಲೇ ದತ್ತು ತೆಗೆದುಕೊಂಡು ಪೋಷಿಸುವಲ್ಲಿ ಮುಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬೆಮ್ಮತಿ ಚಂದ್ರು, ದರ್ಕಸ್ ಕಮಿಟಿ ಸದಸ್ಯ ಲೋಕಪಾಲಯ್ಯ, ಶಾಲೆಯ ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಮುಖಂಡರುಗಳಾದ ನಟರಾಜು, ಪುಟ್ಟಿ, ಜಿಲ್ಲಾ ಮೋರ್ಚ ಮಹಿಳಾ ಸಂಘ, ಗ್ರಾಮಸ್ಥರಾದ ರಾಜು, ಶಿವಣ್ಣ, ವಿದ್ಯಾರ್ಥಿಗಳು ಇದ್ದರು
Back to top button
error: Content is protected !!