ಕುಶಾಲನಗರ, ಸೆ 20: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸಂಬಂಧ ಉಂಟಾಗಿರುವ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಲಿ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾಜಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಬಣಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ, ಆಹ್ವಾನ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೂ ಅನಂತಕುಮಾರ್ ಬಣ ಸಭೆ ನಡೆಯುವ ಸ್ಥಳಕ್ಕೆ ತೆರಳಿದೆ. ಅವರನ್ನು ಕೂಡ ಗೌರವಯುತವಾಗಿ ವೇದಿಕೆಗೆ ಕರೆದು ವಿ.ಪಿ.ಶಶಿಧರ್ ಅವರ ಪಕ್ಕದಲ್ಲಿ ಕೂರಿಸಲಾಯಿತು. ಆದರೂ ಕೂಡ ಸಭೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ನಾಯಕರ ಸಮ್ಮುಖದಲ್ಲೇ ಅನಂತಕುಮಾರ್ ತಂಡ ಸಭೆ ಬಹಿಷ್ಕರಿಸಿ ಹೊರನಡೆದರು. ನೂರಾರು ಮಂದಿ ಹೊರನಡೆದ ಬೆನ್ನಲ್ಲೇ ಅವರನ್ನು ಹಿಂಬಾಲಿಸಿ ಹೋದ ಕೆಪಿಸಿಸಿ ಮುಖಂಡ ಚಂದ್ರಮೌಳಿ ಅವರು ಕಾರ್ಯಕರ್ತರನ್ನು ಸಮಾಧಾನಿಸಿದರು. ಭಾರತ್ ಜೋಡೊ ಕಾರ್ಯಕ್ರಮ ಮುಗಿವ ತನಕ ಯಾವುದೇ ಗೊಂದಲ ಉಂಟುಮಾಡದಂತೆ ಕೋರಿದರು. ಅನಂತಕುಮಾರ್ ನೇತೃತ್ವದಲ್ಲಿ ತಾವು ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ. ನಮಗೆ ಮಾಹಿತಿ ನೀಡಿದೆ ಕಾರ್ಯಕ್ರಮ ನಡೆಸಿದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತೇವೆ ಎಂಬ ಎಚ್ಚರಿಕೆ ನೀಡಿದರು.
Back to top button
error: Content is protected !!