ಕ್ರೈಂ

ದೇವರಾಜು ಅರಸು ನಿಗಮದಿಂದ ಸಾಲ ಒದಗಿಸುವ ಆಮೀಷ, ವಂಚನೆ: ಇಬ್ಬರ ಬಂಧನ

ಕುಶಾಲನಗರ, ಸೆ 20: ಸಾಲ ಸೌಲಭ್ಯ ಒದಗಿಸುವ ಆಮೀಷ ಒಡ್ಡಿ ಸಾವಿರಾರು ರೂಗಳನ್ನು ಮುಂಗಡ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು‌ ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಗೋಣಿಕೊಪ್ಪದ ಕೈಕೇರಿಯ ದಯಾಕರ ಎಂಬವರ ಪತ್ನಿ ಕುಸುಮ ಹಾಗೂ ಕುಶಾಲನಗರದ ಮುಳ್ಳುಸೋಗೆಯ ಶಕ್ತಿ ಬಡಾವಣೆಯ ಜಮುನಾ ಎಂಬವರು‌ ಬಂಧಿತರು. ದೇವರಾಜು ಅರಸು‌ ನಿಗನದಿಂದ ಸಾಲ ಸೌಲಭ್ಯ ಒದಗಿಸುವುದಾಗಿ ಮಾದಾಪಟ್ಟಣ ಗ್ರಾಮದಲ್ಲಿ 20 ಮಂದಿಯಿಂದ ತಲಾ 20 ಸಾವಿರ ಪಡೆದು ಮೋಸ‌ ಮಾಡಲಾಗಿದೆ. ಹಣವನ್ನೂ ವಸೂಲಿ‌ ಮಾಡಿಕೊಡಿ ಎಂದು ಮೋಸ ಹೋದ ಗ್ರಾಮಸ್ಥರ ದೂರಿನ‌ ಮೇರೆ ಇಬ್ಬರನ್ನೂ ವಶಕ್ಕೆ‌‌ ಪಡೆಯಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!