ಕುಶಾಲನಗರ ಸೆ,15: ಕುಶಾಲನಗರ- ಸೋಮವಾರಪೇಟೆ ತಾಲ್ಲೂಕು, ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯು ರಚನೆಗೊಂಡಿದ್ದು ಇದರ ಮೂಲಕ ಮೊದಲ ಹಂತವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ ಮನವಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ. ಕೂಡಿಗೆ ಗ್ರಾಮ ಪಂಚಾಯತಿ ಸೀಗೆಹೊಸೂರು ಸದಸ್ಯ ಅನಂತ್ ನವರ ತಂಡದ ನೇತೃತ್ವದಲ್ಲಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯತಿ ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಲೋಕೋಪಯೋಗಿ ಇಲಾಖೆಯ ಮಸಗೋಡು- ಕಣಿವೆಯ ಸುಮಾರು 18 ಕಿಲೋಮೀಟರ್ ರಸ್ತೆಯು ಕಳೆದ 10 ವರ್ಷಗಳಿಂದ ಪೂರ್ಣ ದುಸ್ಧಿತಿಯಲ್ಲಿದ್ದು ವಾಹನ ಸಂಚಾರ ದುಸ್ಥರವಾಗಿದೆ.
ದಿನಂಪ್ರತಿ 5 ಖಾಸಗಿ ಬಸ್‌ಗಳ ಓಡಾಡುತ್ತಿದ್ದ ಈ ರಸ್ತೆಯು ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರವು ಸ್ಥಗಿತಗೊಂಡಿದೆ. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ.
ಈ ವ್ಯಾಪ್ತಿಯಲ್ಲಿ 5 ಗಿರಿಜನ ಹಾಡಿಗಳಿದ್ದು 5000 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುತ್ತದೆ.
ಈ ವ್ಯಾಪ್ತಿಯಲ್ಲಿ 10 ಗ್ರಾಮಗಳು ಬರುತ್ತಿದ್ದು ಸಾರ್ವಜನಿಕರಿಗೆ, ವಯಸ್ಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ತಲೆದೋರಿದೆ.
ನೂತನ ರಸ್ತೆಯ ಕಾಮಗಾರಿಗೆ ಆಗ್ರಹಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಮೂಲಕ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ, ಜನಪ್ರತಿನಿಧುಗಳಿಗೆ ಮನವಿಯನ್ನು ಸಲ್ಲಿಸಿ ಒಂದು ತಿಂಗಳ ಗಡುವು ನೀಡಲಾಗುವುದು. ಸೂಕ್ತ ಕ್ರಮ ಕೈಗೊಳ್ಳದ್ದಿದರೆ ಗ್ರಾಮಸ್ಥರ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸೇರಿದಂತೆ ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
Back to top button
error: Content is protected !!