ಸಭೆ

ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಸೆ 18: ನಂ 242ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಕೂಡಿಗೆಯಲ್ಲಿ ಸಂಘದ ಸಹಕಾರ ಭವನದಲ್ಲಿ ಸಂಘದ ಅಧ್ಯಕ್ಷರಾದ ಕೆ.ಕೆ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿ ಕಳೆದ ಸಾಲಿನ ವಾರ್ಷಿಕ‌ ಮಹಾಸಭೆ  ವರದಿ ಓದಲು ಕೆಲವು ಸದಸ್ಯರು ಆಗ್ರಹಿಸಿದರು. ವರದಿ ಓದಿ‌ ಮುಗಿದ ಬಳಿಕ ದೀರ್ಘಾವಧಿ ವರದಿ ವಾಚನದಿಂದ ಸಮಯ ವ್ಯರ್ಥ ಎಂದು ಕೆಲವು ಸದಸ್ಯರು ಆಕ್ರೋಷ ವ್ಯಕ್ತಪಡಿಸಿದರು. ಈ‌ ಬಗ್ಗೆ ಪರ ವಿರೋಧ ಹೇಳಿಕೆಗಳು‌ ಮೊಳಗಿದವು. ಖಾಸಗಿ‌ ಕಂಪನಿಯಿಂದ ಸಂಘಕ್ಕೆ ಉಂಟಾದ ವಂಚನೆ ಸಂಬಂಧ ನಡೆಯುತ್ತಿರುವ ಕೋರ್ಟ್ ದಾವೆ, ಬೆಳೆ ವಿಮೆ, ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿ ಬಗ್ಗೆ, ಪ್ರಸಕ್ತ ಅಡಳಿತ ಮಂಡಳಿಯ ಕೆಲವು‌ ನಿರ್ದೇಶಕರ ರಾಜೀನಾಮೆ‌ ಕಾರಣ ವಿಚಾರವಾಗಿ, ಸಾಲ ಮರುಪಾವತಿ ಸಮರ್ಪಕವಾಗದ ಕಾರಣ ಸಂಘ ಎ ದರ್ಜೆಯಿಂದ ಬಿ ದರ್ಜೆಗೆ ಇಳಿದಿರುವ ಬಗ್ಗೆ, 2016-17ನೇ ಸಾಲಿನ ಸಿಜಿಎಸ್ಟಿ, ಎಸ್ಜಿಎಸ್ಟಿ ತೆರಿಗೆ ಒಟ್ಟು 1.90 ಲಕ್ಷದಷ್ಟು ಮೊತ್ತ ಸಂಘಕ್ಕೆ ಬರಲು ಬಾಕಿ ಉಳಿದಿರುವ ಬಗ್ಗೆ, ಆಡಿಟ್ ವರದಿ‌ ಮುದ್ರಣದಲ್ಲಿ ಅಕ್ಷರಗಳು, ಸಂಖ್ಯೆಗಳ ಲೋಪಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದವು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ.ಹಮೀದ್, ಸಿಇಒ ಎಂ.ಪಿ.ಮೀನಾ, ಡಿಸಿಸಿಯ ಸಹಕಾರ ಸಂಘಗಳ ಮೇಲ್ವಿಚಾರಕ ಜಯಪ್ರಕಾಶ್ ಸೇರಿದಂತೆ ನಿರ್ದೇಶಕರು, ಸದಸ್ಯರುಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!