ಕಾರ್ಯಕ್ರಮ

ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ

ಕುಶಾಲನಗರ, ಸೆ 17: ಕುಶಾಲನಗರದ ಲಯನ್ಸ್ ಸಂಸ್ಥೆ ವತಿಯಿಂದ ಶುಕ್ರವಾರ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು.
ಸಮಾರಂಭ ಉದ್ಘಾಟಿಸಿದ
ವಲಯ ಅಧ್ಯಕ್ಷ ಎಲ್.ಮೋಹನ್ ಕುಮಾರ್ ಮಾತನಾಡಿ, ಲಯನ್ಸ್ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಲಯನ್ಸ್ ಸದಸ್ಯರು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜ ಸೇವೆಯಂತಹ ಚಟುವಟಿಕೆಗಳನ್ನು ಕ್ಲಬ್ ಮೂಲಕ ಹಮ್ಮಿಕೊಂಡು ಇತರೆ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ನಿವೃತ್ತ ಮುಖ್ಯ ಶಿಕ್ಷಕರ‌ ನಜೀರ ಅಹಮ್ಮದ್ ಹಾಗೂ ಲೀಲಾವತಿ ಮತ್ತಿತರ ಶಿಕ್ಷಕ ವೃಂದವನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ನಜೀರ್ ಅಹಮ್ಮದ್, ಪ್ರತಿಯೊಬ್ಬರು ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳುವ‌ ಮೂಲಕ ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆಯೊಂದಿಗೆ ಜೀವನ ನಡೆಸಬೇಕು ಎಂದರು.
ಸಮಾಜದಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು,ಸಮಾಜದ ಏಳಿಗೆಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕುಶಾಲನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಸ್ಥೆಯ ಪ್ರಾಂತೀಯ ಮಾರ್ಗದರ್ಶಕ ನವೀನ್‌ ಅಂಬೆಕಲ್ಲು. ಲಯನ್ಸ್ ಕಾರ್ಯದರ್ಶಿ ಸುಮನ್ ಬಾಲಚಂದ್ರ,
ಖಜಾಂಚಿ ಕುಲ್ಲಚನ ಹೇಮಂತ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ, ಸತೀಶ್ ಕುಮಾರ್, ಪ್ರಮುಖರಾದ ಪೊನ್ನಚ್ಚನ ಮೋಹನ್, ಪಿರಿಯಾಪಟ್ಟಣ ಮಹಾದೇವಪ್ಪ ಹಾಗೂ
ಮಡಿಕೇರಿ, ಸುಂಟಿಕೊಪ್ಪ, ಪಿರಿಯಾಪಟ್ಟಣ, ಕೊಪ್ಪ, ಬೆಟ್ಟದಪುರ,ಸೋಮವಾರಪೇಟೆ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!