ಅವ್ಯವಸ್ಥೆ
ತೊರೆನೂರಿನಲ್ಲಿ ಕರು ಮೇಲೆ ಚಿರತೆ ದಾಳಿ

ತೊರೆನೂರಿನಲ್ಲಿ ಕರು ಮೇಲೆ ಚಿರತೆ ದಾಳಿ
ಕುಶಾಲನಗರ ಅ 20: ತೊರೆನೂರು ಗ್ರಾಮದಿಂದ ಭೈರಪ್ಪನಗುಡಿ ಅಳುವಾರಕ್ಕೆ ಹೋಗುವ ಮಾರ್ಗದಲ್ಲಿರುವ ತೊರೆನೂರು ಸಹಕಾರ ಸಂಘದ ನಿರ್ದೇಶಕ ಟಿ. ಜಿ. ಲೋಕೇಶ್ ಎಂಬುವರಿಗೆ ಸೇರಿದ ಕರುವನ್ನು ಸಂಜೆ 6 ಗಂಟೆಯ ಸಮಯದಲ್ಲಿ ಮನೆಯ ಹಿಂಭಾಗದ ಕೊಟ್ಟಿಗೆ ಯಲ್ಲಿ ಚಿರತೆ ದಾಳಿ ನಡೆಸಿ ತಿಂದು ಹಾಕಿದೆ.
ಕಳೆದ ರಾತ್ರಿಯು ಅಳುವಾರ ಮತ್ತು ಅರಗಲ್ಲು ಗ್ರಾಮದಲ್ಲಿಯೂ ಚಿರತೆ ಹಸುಗಳ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ. ಸಂಬಂಧಿಸಿದ ಅರಣ್ಯ ಇಲಾಖೆಯವರು ತುರ್ತು ಕ್ರಮವನ್ನು ತೆಗೆದು ಕೊಳ್ಳ ಬೇಕೆಂದು ಈ ವ್ಯಾಪ್ತಿಯ ರೈತರ ಅಗ್ರಹವಾಗಿದೆ.