ಸೋಮವಾರಪೇಟೆ, ಮಾ 24: ಬರಹಗಾರ್ತಿ ಗೀತಾಂಜಲಿ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೊಡಮಾಡುವ ಮಹಿಳಾ ರತ್ನ 2025 ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನೀಡಲಾಗಿದೆ.
ಭಾನುವಾರ ಬೆಂಗಳೂರಿನ ಈಸ್ಟ್ ಕಲ್ಚರಲ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭ ಬೆಂಗಳೂರು ಸಹಾಯಕ ಪೊಲೀಸ್ ಕಮಿಷನರ್ ರಂಗಪ್ಪ,ಟಿವಿ9 ನಿರೂಪಕಿ ಸುಕನ್ಯಾ, ಸ್ವರ್ಣ ಭಾರತ್ ಪೌಂಡೇಶನ್ ಅಧ್ಯಕ್ಷೆ ಡಾ.ರಜನಿ ಸಂತೋಷ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Back to top button
error: Content is protected !!