ಕುಶಾಲನಗರ, ಸೆ 16: ಟ್ಯಾಕ್ಸಿ ಚಾಲಕರು
ಸಂಘಟಿತರಾಗುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕೊಡಗು ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಹೇಳಿದರು.
ಕುಶಾಲನಗರದ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕುಶಾಲನಗರ ತಾಲ್ಲೂಕು ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟ್ಯಾಕ್ಸಿ ಚಾಲಕರದ್ದು ಜವಾಬ್ದಾರಿಯುತ ಕೆಲಸವಾಗಿದೆ. ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕಿದೆ ಎಂದರು.
ಕೆಟಿಡಿಓ ಕೊಡಗು ಜಿಲ್ಲಾ ಗೌರವಾಧ್ಯಕ್ಷ ಎಂ.ಎ.ಮೊಹಮ್ಮದ್ ರಫೀಕ್ ಮಾತನಾಡಿ ,ರಾಜ್ಯದ 31 ಜಿಲ್ಲೆಗಳಲ್ಲಿ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕಾರ್ಯನಿರ್ವಹಿಸುತ್ತಿದೆ. ನಾವು ಪರಸ್ಪರ ಸಹೋದರರಂತೆ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಚಾಲಕರು ಪ್ರವಾಸಿಗರು ,ಪ್ರಯಾಣಿಕರ ಬಗ್ಗೆ ಗೌರವ ಕೊಡಬೇಕು.ಯಾವುದೇ ಸಮಸ್ಯೆ ಬಂದರೂ ಪ್ರಯಾಣಿಕರ ಮೇಲೆ ಹಲ್ಲೆ ಅಥವಾ ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು.ಜಿಲ್ಲಾ ಸಮಿತಿಗೆ ವಿಷಯವನ್ನು ತಿಳಿಸಿ ಉತ್ತಮ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಗು ಘಟಕದ ನಿರ್ದೇಶಕ ರಘುಹೆಬ್ಬಾಲೆ ಮಾತನಾಡಿ,ಜಿಲ್ಲೆಗೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಭೇಟಿ ಸಂಖ್ಯೆ ಹೆಚ್ಚಿದ್ದು,ಅವರ ಸುರಕ್ಷತೆಗೆ ಟ್ಯಾಕ್ಸಿ ಚಾಲಕರು ವಿಶೇಷ ಒತ್ತು ನೀಡಬೇಕು.ಅವರೊಂದಿಗೆ ಪ್ರೀತಿಯಿಂದ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಕುಶಾಲನಗರ ತಾಲ್ಲೂಕು ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಅಧ್ಯಕ್ಷ ಕೆ.ಎಸ್.ಶಿವು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಜಿಲ್ಲಾ ಕೆಟಿಡಿಓ ಉಪಾಧ್ಯಕ್ಷರಾದ ಕೆ.ಎಂ.ಪರಶುರಾಮ, ಡೆನ್ನೀಸ್,
ಪ್ರಧಾನ ಕಾರ್ಯದರ್ಶಿ ಎಚ್.ಎನ್.ಕಿರಣ್,
ಖಜಾಂಚಿ ಎ.ಸಿ.ಲೋಕೇಶ್,
ಸಹ ಕಾರ್ಯದರ್ಶಿ ಕೆ.ಎನ್. ಮಂಜುನಾಥ್, ಕುಶಾಲನಗರ ತಾಲ್ಲೂಕು ಕೆಟಿಡಿಓ ಗೌರವಾಧ್ಯಕ್ಷ ಎಂ.ಆರ್.ಪ್ರಕಾಶ್,ಉಪಾಧ್ಯಕ್ಷ ಸುನೀಲ್ ಕುಮಾರ್, ಕಾರ್ಯದರ್ಶಿ ಡಿ.ಟಿ.ಗೋವಿಂದ, ಸಹ ಕಾರ್ಯದರ್ಶಿ ಮಿಲನ್ ನಾಣಯ್ಯ,ಕೋಶಾಧಿಕಾರಿ ಸಿ.ಆರ್.ಶ್ರೀನಿವಾಸ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಬಿ.ವಿ.ರವಿ,ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಮಡಿಕೇರಿ ಘಟಕದ ಶಂತು ಕಾರ್ಯಪ್ಪ ,ಉದಯಕುಮಾರ್,ಸುಂಟಿಕೊಪ್ಪ ಪ್ರವೀಣ್, ಪಿರಿಯಾಪಟ್ಟಣ ಕೃಷ್ಣ, ಮಹೇಶ್,ಉದ್ಯಮಿ ಬಾಲಕೃಷ್ಣ, ಉದ್ಯಮಿ ಇಬ್ರಾಹಿಂ, ಗೌಸ್, ರಿಹನ್ ಉಪಸ್ಥಿತರಿದ್ದರು. ಇದೇ ಸಂದರ್ಭ ಹಿರಿಯ ಟ್ಯಾಕ್ಸಿ ಚಾಲಕರಾದ ಫರ್ನಾಂಡೀಸ್,ಪಿರಿಯಾಪಟ್ಟಣದ ಕೃಷ್ಣ,ಸಂತು ಕಾರ್ಯಪ್ಪ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಉದ್ಯಮಿಗಳು ಚಾಲಕರಿಗೆ ಶರ್ಟ್ ಕೊಡುಗೆ ನೀಡಿದರು.
Back to top button
error: Content is protected !!