ಕುಶಾಲನಗರ, ಸೆ 13:ಯಾವುದೇ ಕಾರಣಕ್ಕೂ ಮುಳ್ಳುಸೋಗೆ ಗ್ರಾಪಂ ಕೈಬಿಟ್ಟು ಪುರಸಭೆ ರಚನೆ ಆಗಕೂಡದು. ಮುಳ್ಳುಸೋಗೆ ಒಳಗೊಂಡಂತೆ ಕುಶಾಲನಗರ ಪುರಸಭೆ ರಚನೆಯಾಗಬೇಕು ಎಂದು ಮುಳ್ಳುಸೋಗೆ ಗ್ರಾಪಂ ಗೊಂದಿಬಸವನಹಳ್ಳಿ ಭಾಗದ ಸದಸ್ಯ ಜಿ.ಬಿ.ಜಗದೀಶ್ ಎಚ್ಚರಿಸಿದರು. ಗ್ರಾಮಸ್ಥರ ಅಭಿವೃದ್ಧಿಗಾಗಿ ಪುರಸಭೆ ರಚನೆಗೆ ತಾತ್ಕಾಲಿಕವಾಗಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಕೋವಿಡ್ ಸಂದರ್ಭ ಅರ್ಧ ವರ್ಷ ಅಭಿವೃದ್ಧಿ ಕುಂಠಿತಗೊಂಡಿದ್ದ ಕಾರಣ ಆಕ್ಷೇಪಣೆ ಸಲ್ಲಿಸಿದ ಹಿನ್ನಲೆಯಲ್ಲಿ ಜನಸೇವೆಗೆ ಮತ್ತಷ್ಟು ಕಾಲವಕಾಶ ಲಭಿಸಿತ್ತು. ಕೇವಲ ಮಾದಾಪಟ್ಟಣ ಒಳಗೊಂಡು ಪುರಸಭೆ ರಚನೆಯಾದರೆ ದೊರಕುವ ಕೋಟ್ಯಾಂತರ ಅನುದಾನ ಬಳಕೆಗೆ ಕುಶಾಲನಗರ, ಮಾದಾಪಟ್ಟಣದಲ್ಲಿ ಫಲಾನುಭವಿಗಳ ಕೊರತೆ ಉಂಟಾಗಲಿದೆ. ಮುಳ್ಳುಸೋಗೆ ಗ್ರಾಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಜಾತಿ, ಪಪಂಗಡ, ಅಲ್ಪಸಂಖ್ಯಾತರಿದ್ದಾರೆ. ಇವರಿಗೆ ಯೋಜನೆ ತಲುಪಲು ಮುಳ್ಳುಸೋಗೆ ಪುರಸಭೆಗೆ ಸೇರ್ಪಡೆ ಅವಶ್ಯ. ಇನ್ನೆರಡು ದಿನಗಳಲ್ಲಿ ಗ್ರಾಪಂ ಆಡಳಿತ ಮಂಡಳಿ ತುರ್ತು ಸಭೆ ಕರೆದು ಪೌರಾಡಳಿತಕ್ಕೆ ಸಲ್ಲಿಸಿದ್ದ ಆಕ್ಷೇಪಣೆ ಹಿಂಪಡೆಯಲಾಗುವುದು ಎಂದರು.