ಕುಶಾಲನಗರ, ಸೆ 12: ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಿ.ಎನ್. ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು, ಸಂಘವು ರೈತರ ಸಹಕಾರದೊಂದಿಗೆ ಈ ಸಾಲಿನಲ್ಲಿ ಉತ್ತಮ ವ್ಯವಹಾರ ನಡೆಸಿ 2021-22 ಸಾಲಿನಲ್ಲಿ14 ಲಕ್ಷ 63 ಸಾವಿರ ರೂ ಲಾಭವನ್ನು ಗಳಿಸಿದೆ. ಸಂಘದ ವ್ಯಾಪ್ತಿಯ ಎಲ್ಲಾ ರೈತರಿಗೆ ಮತ್ತು ಸದಸ್ಯರುಗಳಿಗೆ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು. ಅದನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಬೆಳವಣಿಗೆ ಅವಕಾಶ ಮಾಡಿಕೊಡಬೇಕೇಂದು ಮನವಿ ಮಾಡಿದರು .
ಸಭೆಯಲ್ಲಿ ಉಪಾಧ್ಯಕ್ಷೆ ಎಸ್.ವಿ. ನಾಗಮ್ಮ, ನಿರ್ದೇಶಕರಾದ ಟಿ. ಡಿ. ಅನುಪಮ, ಎಸ್. ಎಸ್. ಕೃಷ್ಣ, ಚಂದ್ರಶೇಖರ್, ಎನ್. ಎನ್. ಧರ್ಮಪ್ಪ, ಪದ್ಮಬಾಯಿ, ಬೇಲಯ್ಯ, ರಮೇಶ್, ರುದ್ರಪ್ಪ ವೀರಭದ್ರಪ್ಪ, ಮೇಲ್ವಿಚಾರಕ ನವೀನ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಎಸ್. ಜೀವನ್, ನಗದು ಗುಮಾಸ್ತ ಎಸ್.ಆರ್. ರೂಪ ಇದ್ದರು.
Back to top button
error: Content is protected !!