ಕುಶಾಲನಗರ, ಸೆ 11: ಆತ್ಮೀಯ ವೀರಶೈವ ಸಮಾಜದ ಬಂಧುಗಳೇ,
ಕೊಡಗು ಜಿಲ್ಲೆಯಲ್ಲಿ ಪರಂಪರಾಗತವಾಗಿ ರಾಜ ಮಹಾರಾಜರ ಕಾಲದಿಂದ ನಮ್ಮ ಸಮಾಜದ ಹಲವಾರು ಆಸ್ತಿಗಳು ಇದ್ದು, ಅದರಲ್ಲಿ ಐತಿಹಾಸಿಕ ಮಡಿಕೇರಿ ನಗರದ ಗದ್ದುಗೆ ಅನ್ಯ ಧರ್ಮೀಯರಿಂದ ಅತಿಕ್ರಮಣಕ್ಕೆ ಒಳಪಟ್ಟು ಅದನ್ನು ತೆರುಗೊಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಸು ಕಟ್ಲೆಗಳು ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಅದೇ ರೀತಿಯಾಗಿ ನಮ್ಮ ಜಿಲ್ಲೆಯಲ್ಲಿರುವ ಮುರುಘ ಮಠದ ಆಸ್ತಿಗಳು ಕೂಡ ಕಂಡವರ ಪಾಲಾಗಿ ಹೋಗಿರುವ ಖೇದಕರ ವಿಚಾರ ನಮ್ಮ ಕಣ್ಣ ಮುಂದಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನ್ಯ ಕರ್ನಾಟಕ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಮತ್ತು ಸದರಿ ಅತಿಕ್ರಮಣಗಳನ್ನು ತೆರವು ಮಾಡಲಿಕ್ಕಾಗಿ ನಾವುಗಳು ತುರ್ತಾಗಿ ಕೊಡಗಿನಲ್ಲಿ ಕಾನೂನು ಮತ್ತು ಸಾರ್ವಜನಿಕ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗಿದ್ದು ಈ ಕುರಿತು ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಕೊಡಗು ಜಿಲ್ಲಾ ಅಧ್ಯಕ್ಷರಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಮತ್ತು ಈ ಮೇಲ್ಕಂಡ ವಿಚಾರದ ಎಲ್ಲಾ ಹೋರಾಟಗಳಲ್ಲಿ ನಾನು ಕೂಡ ಪಾಲ್ಗೊಳ್ಳುತ್ತೇನೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
– ರವಿ ಅಜ್ಜಳ್ಳಿ, ಜಿಲ್ಲಾ ಕಾರ್ಯದರ್ಶಿ, ವೀರಶೈವ ಹಿತರಕ್ಷಣಾ ವೇದಿಕೆ.ಕೊಡಗು.
Back to top button
error: Content is protected !!