ಆರೋಗ್ಯ
ಕುಶಾಲನಗರದಲ್ಲಿ ಹೆಲ್ದಿ ಬ್ರೇಕ್ ಫಾಸ್ಟ್

ಕುಶಾಲನಗರ, ಅ 02: ಕುಶಾಲನಗರದಲ್ಲಿ ಹೆಲ್ದಿ ಬ್ರೇಕ್ ಫಾಸ್ಟ್ ಎಂಬ ಹೆಸರಿನಲ್ಲಿ ಯುವಕನೋರ್ವ ಕೆಲವು ಆಯ್ದ ಪೌಷ್ಟಿಕಾಂಶ ಭರಿತ ತಿನಿಸನ್ನು ಮಾರಾಟ ಆರಂಭಿಸಿದ್ದಾನೆ. ನ್ಯೂಟ್ರಿಷಿನ್ ಕೊರತೆಗಳುಳ್ಳ ಸಾಂಪ್ರದಾಯಿಕ ಆಹಾರಗಳಾದ ದೋಸೆ, ಇಡ್ಲಿ, ಪೂರಿ, ಮತ್ತಿತರ ಬೆಳಗಿನ ಆಹಾರಗಳಿಗೆ ಪರ್ಯಾಯ ಎನಿಸಿರುವ ಪ್ರೋಟಿನ್ ಭರಿತ ಓಟ್ಸ್, ಹಣ್ಣು, ಒಣಹಣ್ಣುಗಳ ಮಿಶ್ರಿತ ಆಹಾರವನ್ನು ಜನರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾನೆ. ಎಂದಿನ ಬೆಳಗಿನ ಉಪಹಾರ, ಫಾಸ್ಟ್ ಫುಡ್ ಗಳ ಬದಲಾಗಿ ಪರ್ಯಾಯ ತಿನಿಸನ್ನು ಬಯಸುವವರು ಮಾತ್ರ ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಮನೆಯಲ್ಲಿಯೇ ತಯಾರಿಸಬಹುದಾದ ಬೇರೆಲ್ಲೂ ಮುಕ್ತವಾಗಿ ದೊರಕದ ಈ ತಿನಿಸನ್ನು ತಾನ್ನ ಸಣ್ಣ ಟೇಬಲ್ ಮೂಲಕ ಸ್ಥಳದಲ್ಲಿಯೇ ತಯಾರಿಸಿ ನೀಡುತ್ತಿರುವ ಕಿರಣ್ ಎನ್ನುವ ಯುವಕನ ಪ್ರಯತ್ನ ನಿಧಾನವಾಗಿ ಮೆಚ್ಚುಗೆ ಗಳಿಸುತ್ತಿದೆ. ಕುಶಾಲನಗರ ಐಬಿ ಬಳಿ ಈತ ಕಂಡುಬರುತ್ತಾನೆ.



