ಸನ್ಮಾನ

ಪ್ಯಾಡಿಂಗ್ ಟನ್ ಸ್ಥಾಪಕ ಟಿ. ಎಲ್. ಪ್ರವೀಣ್ ರಿಗೆ ‘ಎಕ್ಸಲೆನ್ಸ್ ಆಫ್ ಬಿಸಿನೆಸ್ ಅವಾರ್ಡ್’

ಕುಶಾಲನಗರ, ನ.‌ 15 : ಪ್ಯಾಡಿಂಗ್ ಟನ್ ಸಮೂಹ ಗ್ರಾಹಕರಿಗೆ ನೀಡುತ್ತಿರುವ ಸೇವೆಯ ಗುಣಮಟ್ಟ, ವಿಶ್ವಾಸಾರ್ಹತೆ, ಉದ್ಯೋಗ ಸೃಷ್ಟಿ ಹಾಗೂ ಸಂಸ್ಥೆಯ ಬೆಳವಣಿಗೆ ಕಂಡು ಪ್ರಸ್ತುತ ಮಣಿಪಾಲದಲ್ಲಿ ವಾಸವಿರುವ ಕುಶಾಲನಗರ ಮೂಲದ ಉದ್ಯಮಿ, ಪ್ಯಾಡಿಂಗ್ ಟನ್ ಸಂಸ್ಥಾಪಕ ಟಿ. ಎಲ್ . ಪ್ರವೀಣ್ ಅವರಿಗೆ ‘ಎಕ್ಸಲೆನ್ಸ್ ಆಫ್ ಬಿಸಿನೆಸ್ ಅವಾರ್ಡ್’ ಅನ್ನು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ವತಿಯಿಂದ ಸಂಸ್ಥೆಯ ನಿವೇಶನದಲ್ಲಿ ಜರುಗಿದ ಮಹಾಸಭೆಯಲ್ಲಿ ರವಿವಾರ ಪ್ರದಾನ ಮಾಡಲಾಯಿತು.

ಇದೇ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನಿಯ ಸಮಿತಿಗೆ ಚಿಕ್ಕಣ್ಣ ಬಡಾವಣೆಯಲ್ಲಿ ನಿವೇಶನ ದಾನ ಮಾಡಿದ ಆವರ್ತಿಯ ಯೋಗೇಶ್ ಅವರನ್ನು, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಬಿ. ಲಿಂಗರಾಜು, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಸ್ಥಾಪಕ ಕಾರ್ಯದರ್ಶಿ ಬಿ. ಆರ್. ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!