ಟ್ರೆಂಡಿಂಗ್

ಕೂಡಿಗೆ ಹಳೆ ಸೇತುವೆ ಮೇಲೆ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಗ್ರಾಮಸ್ಥರ ಆಕ್ರೋಶ: ಪ್ರತಿಭಟನೆ ಎಚ್ಚರಿಕೆ

ಕೂಡಿಗೆ, ಅ. 1: ಕೂಡಿಗೆ ಸಂಗಮ ಸಮೀಪದಿಂದ ಕುಶಾಲನಗರಕ್ಕೆ ಅಮೃತ- 2 ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಪೈಪ್ ಲೈನ್ ಅಳವಡಿಕೆ ಕಾರ್ಯವು ನಡೆದಿದ್ದು, ಸಂಬಂಧಿಸಿದ ಕುಡಿಯುವ ನೀರು ಸರಬರಾಜು ಗುತ್ತಿಗೆದಾರ ಮನಬಂದಂತೆ ಬೃಹತ್ ಪ್ರಮಾಣದ ಪೈಪ್ ಲೈನ್ ಅಳವಡಿಕೆ ಮಾಡಿ ಸಾರ್ವಜನಿಕರು ಸೇತುವೆ ಮೇಲೆ ತಿರುಗಾಡದಂತೆ ಮಾಡಿರುವ ಹಿನ್ನೆಲೆಯಲ್ಲಿ ಅನೇಕ ಗ್ರಾಮಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 1 ವರ್ಷಗಳ ಹಿಂದೆ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯು ಕೂಡಿಗೆಯಲ್ಲಿ ಆರಂಭಗೊಂಡಿದರೂ ಸಹ ಸಂಬಂಧಿಸಿದ ಗುತ್ತಿಗೆದಾರನಿಗೆ ಗ್ರಾಮ ಪಂಚಾಯತಿ ವತಿಯಿಂದ ಇದಕ್ಕೆ ಸಂಬಂಧಿಸಿದಂತೆ ತಿಳುವಳಿಕೆ ಪತ್ರವನ್ನು ನೀಡಿದರೂ ಸಹ ಹಳೆ ಸೇತುವೆ ಮೇಲೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮಾಡುವಾಗ ಒಂದು ಬದಿಯಲ್ಲಿ ಅಳವಡಿಕೆ ಮಾಡದೆ ಸೇತುವೆ ಮಧ್ಯ ಭಾಗದಲ್ಲಿ ಅಳವಡಿಕೆ ಮಾಡಿರುವುದಾಗಿ ಸಾರ್ವಜನಿಕರಿಗೆ ತಿರುಗಾಡಲು ಬಾರಿ ತೊಂದರೆಗಳು ಅಗುತ್ತಿವೆ.
ಸಮೀಪದಲ್ಲಿರುವ ಹಾರಂಗಿ ನದಿಯ ಸೇತುವೆಯ ಮೇಲೆ ಸಾವಿರಾರು ವಾಹನ ದಟ್ಟಣೆ ಇರುವುದರಿಂದಾಗಿ ಸಾರ್ವಜನಿಕರು ಶಾಲಾ,ಕಾಲೇಜು ವಿದ್ಯಾರ್ಥಿಗಳ ತಿರುಗಾಟಕ್ಕೆ ಅನುಕೂಲವಾಗುತ್ತಿತು ಇದೀಗ ಕುಡಿಯುವ ನೀರಿನ ಸರಬರಾಜು ಗುತ್ತಿಗೆದಾರ ಸಂಬಂಧಿಸಿದ ಇಲಾಖೆಯ ಅನುಮತಿಯನ್ನು ಪಡೆಯದೆ ಮನಬಂದಂತೆ ಅಳವಡಿಕೆ ಮಾಡಿರುವುದನ್ನು ಗ್ರಾಮ ಪಂಚಾಯತಿ ಮಾಜಿ ಸದಸ್ಯರುಗಳಾದ ಟಿ.ಹಮೀದ್, ಎಸ್. ಆರ್.ಅರುಣ್ ರಾವ್, ಬಾಲಕೃಷ್ಣ ಸೇರಿದಂತೆ ಹಲವು ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ,ಕಾರ್ಯದರ್ಶಿ ಪುನಿತ್ ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಧಳ ಪರಿಶೀಲನೆ ನಡೆಸಿ, ನಂತರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಈಗಾಗಲೇ ಗ್ರಾಮ ಪಂಚಾಯತಿ ವತಿಯಿಂದ ಹಿಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆಗಳನ್ನು ನಡೆಸಿ ಸಂಬಂಧಿಸಿದವರಿಗೆ ತಿಳುವಳಿಕೆ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿಸಿದವರು ಕಾಮಗಾರಿಯ ಪೂರ್ಣಗೊಳಿಸುವ ಹಂತದಲ್ಲಿ ಇರುವುದರಿಂದ ಸೇತುವೆ ಮೇಲಿನ ಬೃಹತ್ ಗಾತ್ರದ ಪೈಪ್ ಲೈನ್ ಗಳನ್ನು ಸರಿಪಡಿಸದಿದ್ದರೆ ಕಾಮಗಾರಿಯನ್ನು ತಡೆ ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!