ಕುಶಾಲನಗರ, ನ 16: ಗೊಂದಿಬಸವನಹಳ್ಳಿ ಗ್ರಾಮದ 70 ವರ್ಷ ಇತಿಹಾಸ ಹೊಂದಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣ, ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇವಾಲಯ ಪುನರ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.
ರೂ 70 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ದೇವಾಲಯ ಪುನರ್ ನಿರ್ಮಾಣ ಕಾಮಗಾರಿಗೆ ಸರಕಾರದಿಂದ ಮತ್ತು ವೈಯಕ್ತಿಕವಾಗಿ ಅಗತ್ಯ ನೆರವು ಒದಗಿಸಲು ಕ್ರಮವಹಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಗಳಿಗೆ ಶಾಸಕರಿಂದ ಗ್ರಾಮದಲ್ಲಿ ಹಲವು ಅಭಿವೃದ್ದಿ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ
ಕೆಪಿಸಿಸಿ ಸಂಯೋಜಕ ನಟೇಶ್ ಗೌಡ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ದಾನಿಗಳಾದ ಡಿ.ಎಸ್.ಜಗದೀಶ್, ನಂಜುಂಡಸ್ವಾಮಿ ಎಂ.ಎಸ್.ರಾಜೇಶ್,ಮಧುಕುಮಾರ್, ಅಣ್ಣೇಗೌಡ, ದೇವಾಲಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗೋವಿಂದಪ್ಪ, ಶಿಲ್ಪಿ ಗಾಂಧಿ ವೇದಿಕೆಯಲ್ಲಿ ಇದ್ದರು.
ಈ ಸಂದರ್ಭ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿ.ಎಸ್.ಯೋಗೇಶ್, ಉಪಾಧ್ಯಕ್ಷ ವಸಂತ ರೈ, ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಜಿ.ಮಂಜಪ್ಪ, ಖಜಾಂಚಿ ಡಿ.ಎಸ್.ಹರೀಶ್, ಪ್ರಮುಖರಾದ ಎಂ.ಬಿ.ಪ್ರಕಾಶ್, ಶ್ರೀನಿವಾಸ್, ನಾರಾಯಣ ನಾಯಕ್, ಡಿ.ಜಿ.ಪ್ರದೀಪ್, ದೇವ ನಾಯಕ, ಜಿ.ಜಿ.ರಮೇಶ್, ಜಿ.ಆರ್.ಪುನಿತ್, ಹರಿಪ್ರಸಾದ್, ಡಿ.ಜಿ.ನಂದೀಶ್, ಸಿ.ಎನ್.ಮದನ್, ಪಿ.ಬಿ.ಮಾದಪ್ಪ,ಮಲ್ಲಿಗೆ,ಮಂಜುಳಾ ಮತ್ತಿತರರು ಇದ್ದರು.
Back to top button
error: Content is protected !!