ಕುಶಾಲನಗರ, ಜೂ 22:ಕರಿಕೆ ಪ್ರೌಢಶಾಲೆಗೆ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಸುನಿಲ್ ರವರು ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ ಹೆಣ್ಣು ಮಕ್ಕಳಲ್ಲಿ ಗರ್ಭ ಕೊರಳಿನ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 14 ವರ್ಷ ಮೇಲ್ಪಟ್ಟ15 ವರ್ಷದ ಒಳಗಿನ ಮಕ್ಕಳಿಗೆ HPV ಲಸಿಕೆಯನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿ ಕರಿಕೆಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ HPV ಲಸಿಕೆಯನ್ನು ನೀಡಿ, ನಶಾ ಮುಕ್ತ ಅಭಿಯಾನ, ಅತಿಸಾರ ಬೇಧಿ ನಿಯಂತ್ರಣ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಶಾಂತಿ ಅವರು ಮಲೇರಿಯಾ ಮಾಸಾಚರಣೆ ಬಗ್ಗೆ, ಸೊಳ್ಳೆಯಿಂದ ಹರಡುವ ಕಾಯಿಲೆಗಳ ಬಗ್ಗೆ ಇದೇ ತಿಂಗಳು ಜೂನ್ 28ರಂದು ನಡೆಯುವ ಪೋಲಿಯೋ ಭಾನುವಾರದ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಆಯುಷ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ರಾಜೇಶ್ವರಿ, ಮುಖ್ಯೋಪಾಧ್ಯಾಯರಾದ ರಾಜಶೇಖರ್, ಪ್ರಯೋಗಶಾಲಾ ತಂತ್ರಜ್ಞರಾದ ಧನುಶ್ರೀ, ಆಶಾ ಕಾರ್ಯಕರ್ತರದ ಮೇನಕ, ಮತ್ತು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
Back to top button
error: Content is protected !!