ಕುಶಾಲನಗರ, ಸೆ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಆ. 29 ರಂದು ಲ್ಯಾನ್ಸಿ ಎಂಬ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನನ್ನು ಬಂಧಿಸಲು ಪೊಲೀಸರು ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೃತ ಯುವತಿಯ ಪೋಷಕರಾದ
ಕೆ.ಎಸ್.ಕಾಂತರಾಜು ಮತ್ತು ಎಲಿಜಬೆತ್ ಅವರು, ತಮ್ಮ ಪುತ್ರಿಯನ್ನು ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷ ಚೆಲುವರಾಜು ಅವರ ಪುತ್ರ ಕುಮಾರ ಎಂಬಾತ ಪ್ರೀತಿಸುತ್ತಿದ್ದ. ಮದುವೆಯಾಗುವ ಭರವಸೆ ನೀಡಿದ್ದ. ಪ್ರತಿ ಬಾರಿಯೂ ಮದುವೆಯ ವಿಚಾರ ಬಂದಾಗ ಇಲ್ಲದ ಸಬೂಬು ಹೇಳುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಆತನ ತೀವ್ರ ಕಿರುಕುಳಕ್ಕೆ ಪುತ್ರಿ ಬೇಸತ್ತಿದ್ದಳು. ಇದರಿಂದ ಮನನೊಂದು ದಿಢೀರನೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಮಾರನ ವಿರುದ್ದ ಡೆತ್ ನೋಟ್ ಕೂಡ ಬರೆದಿದ್ದು ಈ ಸಂಬಂಧ ನೀಡಿದ ದೂರಿಗೆ ಇದುವರೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆ ಇದುವರೆಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಕೂಡ ದೂರು ನೀಡಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸದಿದ್ದಲ್ಲಿ ಡಿವೈಎಸ್ಪಿ ಕಛೇರಿ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮೃತಳ ಹಿತೈಷಿಗಳಾದ ಕೃಷ್ಣ, ಹೇಮಾವತಿ, ಖಲೀಲ್ ಅಹಮ್ಮದ್ ಇದ್ದರು.
Back to top button
error: Content is protected !!