ಸಭೆ
ಪದಚ್ಯತಿಯಿಂದ ಸ್ವಾಭಿಮಾನಕ್ಕೆ ಧಕ್ಕೆ: ಕಾರಣ ತಿಳಿಸಿ: ಬಿ.ಎಸ್.ಅನಂತಕುಮಾರ್
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಹುದ್ದೆ ಬದಲಾವಣೆ ಸಂಬಂಧ ನಡೆದ ಸಭೆ
ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿ.ಎಸ್.ಅನಂತಕುಮಾರ್ ಅವರ ಪದಚ್ಯತಿ ಹಿನ್ನಲೆಯಲ್ಲಿ ಬಿ.ಎಸ್.ಅನಂತಕುಮಾರ್ ನಿವಾಸದಲ್ಲಿ ಕಾರ್ಯಕರ್ತರು, ಪ್ರಮುಖರ ಸಭೆ ನಡೆಯಿತು. ಪದಚ್ಯುತಿ ಸಂಬಂಧ ಚರ್ಚೆ ನಡೆಯಿತು. ಬಿ.ಎಸ್.ಅನಂತಕುಮಾರ್ ಸಭೆಯಲ್ಲಿ ಅಸಮಾಧಾನ ತೋಡಿಕೊಂಡರು. ಬ್ಲಾಕ್ ಕಾಂಗ್ರೆಸ್ ಗೆ ಕಳೆದ 3 ವರ್ಷ ಸಹಕಾರ ನೀಡದ ವಿ.ಪಿ.ಶಶಿಧರ್ ಅವರಿಗೆ ಹುದ್ದೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಾಧ್ಯಕ್ಷರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಎಚ್ಚರಿಸಿದರು
ಹುದ್ದೆ ಬದಲಾವಣೆಯಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷದ ನಾಯಕರು ಪದಚ್ಯುತಿಗೊಳಿಸಿದರೂ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ಸ್ವಚ್ಛತೆ ಮಾಡಬೇಕಾಗಿದೆ. ದಬ್ಬಾಳಿ ,ಸುಳ್ಳು ಆರೋಪ ಮಾಡಿ ಪದಚ್ಯುತಿಗೊಳಿಸಲಾಗಿದೆ. ಸೂಕ್ತ ಕಾರಣ ಹಾಗೂ ಕಾರಣಕರ್ತರ ಬಗ್ಗೆ ತಿಳಿಸಿ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಕೋರಿದರು. 2.5 ವರ್ಷ ಉತ್ತಮ ಸಂಘಟನೆ ಮಾಡಲಾಗಿದೆ. 130 ಸದಸ್ಯರು, ಪಕ್ಷ ಬಿಡುವ ಅವಶ್ಯಕತೆ ಇಲ್ಲ. ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಂದಿದೆ.ಪಕ್ಷ ಬಿಡುವ ಪ್ರಶ್ನೆ ಇಲ್ಲ. ಟಿಕೇಟ್ ಯಾರಿಗೆ ಕೊಟ್ಟರು ಅವರ ಗೆಲುವಿಗೆ ಶ್ರಮಿಸುತ್ತೇವೆ. ಡಿಸಿಸಿ ಅಧ್ಯಕ್ಷರ ಆಯ್ಕೆಯಾಗಿಲ್ಲ.ಕಾರ್ಯಾಧ್ಯಕ್ಷ ಮಾತ್ರ. ಪಕ್ಷದ ವಿರೋಧಿ ಚಟುವಟಿಕೆ ನಡೆಸಿದ ವ್ಯಕ್ತಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ .ಇದು ಯಾವ ನ್ಯಾಯ ಎಂದರು.
ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರೀಫ್ ಇಬ್ರಾಹಿಂ ಮಾತನಾಡಿ, ಅಲ್ಪಸಂಖ್ಯಾತರಿಗೆ ಸ್ಥಾನಮಾನ ಏಕೆ ಕೊಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳಿಗೆ ಹೋಗದಂತೆ ಶಶಿಧರ್ ತಡೆ ಮಾಡುತ್ತಿದ್ದರು. ಪಕ್ಷದ ಸಂಘಟನೆಗೆ 2.4 ವರ್ಷ ಪ್ರಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ.ನಾಯಕರಿಂದಲೇ ಕಾರ್ಯಕರ್ತರ ಕಡೆಗಣನೆ ಮಾಡಲಾಗಿದೆ. ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯ ಇಲ್ಲ: ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.