ಕುಶಾಲನಗರ, ಸೆ 03: ಕುಶಾಲನಗರ ತಾಲ್ಲೂಕಿನಾದ್ಯಂತ ಕೊಡವ ಭಾಷಿಗರು ಹಾಗು ಅರೆ ಭಾಷೆ ಜನಾಂಗ ಬಾಂಧವರು ಕೈಲ್ ಪೋಳ್ದ್ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆ ಮನೆಯಲ್ಲಿ ಮಡಿ ಮಾಡಿ ದೇವರನ್ನು ಪೂಜಿಸಲಾಯಿತು. ಬಳಿಕ ಮನೆಯಲ್ಲಿ ಹಾಗು ಕೃಷಿಯಲ್ಲಿ ಬಳಸುವ ನೇಗಿಲು, ನೊಗ, ಕತ್ತಿ, ಹಾರೆ, ಕೋವಿ ಮೊದಲಾದ ಪರಿಕರಗಳನ್ನು ಇಟ್ಟು ಪೂಜಿಸಲಾಯಿತು.
ನಂತರ ನೆರೆಹೊರೆಯ ಮಂದಿ ಹಾಗು ಬಂಧು ಬಳಗದವರೊಂದಿಗೆ ಸೇರಿ ಪಂದಿ ಕರಿ, ಕಡುಬಿಟ್ಟು ಹಾಗು ಸಿಹಿ ತಯಾರಿಸಿ ಸಾಮೂಹಿಕವಾಗಿ ಸವಿದರು.
ನಂತರ ಮನೆ ಮಂದಿ ಮಕ್ಕಳೊಂದಿಗೆ ಸೇರಿ ಮನರಂಜನೆಗಾಗಿ ಕೋವಿಯಿಂದ ತೆಂಗಿನ ಕಾಯಿಗೆ ಗುರಿ ಇಟ್ಟು ಗುಂಡು ಹಾರಿಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾ ಪುಟ್ಟಪ್ಪ ಅವರ ಮನೆಯಲ್ಲಿ ಕೈಲ್ ಪೋಳ್ದ್ ಆಚರಿಸಲಾಯಿತು.
Back to top button
error: Content is protected !!