ಪ್ರಕಟಣೆ

ಜೆಸಿಐ ಕುಶಾಲನಗರ ಕಾವೇರಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ

ಕುಶಾಲನಗರ, ನ 25: ಜೆಸಿ ಶ್ರೀನಿವಾಸ್ ರವರು ಜೆಸಿಐ ಕುಶಾಲನಗರ ಕಾವೇರಿ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ವಿಶೇಷ ಸಭೆಯಲ್ಲಿ ನೂತನ ಆಡಳಿತ ಆಯ್ಕೆ ಪ್ರಕ್ರಿಯೆಯನ್ನು ನಾಮಿನೇಷನ್ ಸಮಿತಿ ಅಧ್ಯಕ್ಷರಾಗಿದ್ದ ಪೂರ್ವ ಅಧ್ಯಕ್ಷ ಜೆಸಿ ರಜನಿಕಾಂತ್ ಎಂ.ಜೆ. ರವರು ಸುವ್ಯವಸ್ಥಿತವಾಗಿ ನಡೆಸಿ, ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸಿದರು.

ಸಭೆಯಲ್ಲಿ ಜೆಸಿ ತಂಬಂಡ ತೇಜ ದಿನೇಶ್ (2025 ಅಧ್ಯಕ್ಷರು),
PZVP ಪ್ರವೀಣ್ ಕೆ,
PZVP ಜೆಸಿ ಪ್ರಶಾಂತ್,
ಶನಿವಾರಸಂತೆ ಅಧ್ಯಕ್ಷ ಜೆಸಿ ರವಿ,
ಹಾಗೂ ಜೆಸಿ ಸದಸ್ಯರಾದ ಜೆಸಿ ಕೋಮಲ, ಜೆಸಿ ತಾಜ್ ಕಾವೇರಮ್ಮ, ಜೆಸಿ ಆಲ್ಬರ್ಟ್, ಜೆಸಿ ಡಯಾನ ಸೇರಿದಂತೆ
ಕುಶಾಲನಗರ ಕಾವೇರಿಯ ಅನೇಕ ಹಿರಿಯ ಜೆಸಿ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಸಭೆಯು ಶಿಸ್ತುಬದ್ಧವಾಗಿ ನೆರವೇರಿದ್ದು, ನೂತನ ಅಧ್ಯಕ್ಷರಾದ ಜೆಸಿ ಶ್ರೀನಿವಾಸ್ ರವರಿಗೆ ಎಲ್ಲರೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!