ಕುಶಾಲನಗರ, ನ 26: (ಕುಶಲವಾಣಿ) ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಛೇರಿಯ ಅಕೌಂಟ್ಸ್ ವಿಭಾಗದ ಕ್ಲರ್ಕ್ ಚಂಗಪ್ಪ (47) ಹೃದಯಾಘಾತದಿಂದ ನಿಧನರಾದರು.
ಕರ್ತವ್ಯ ವೇಳೆ ಬೆಳಗಿನ ಉಪಹಾರಕ್ಕೆ ಹೋಟೆಲ್ ಗೆ ತೆರಳಿದ್ದ ಸಂದರ್ಭ ಘಟನೆ ಸಂಭವಿಸಿದೆ. ಕುಶಾಲನಗರ ಖಾಸಗಿ ಅಸ್ಪತ್ರೆಗೆ ಕೇಂದ್ರಕ್ಕೆ ರವಾನಿಸಿದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Back to top button
error: Content is protected !!