ಆರೋಪ

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯ ಆರೋಪ: ಶಾಸಕರು ಗಮನಹರಿಸಲು ಕೋರಿಕೆ

ಕುಶಾಲನಗರ, ಜು 27: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ರೋಗಿಗಳು ಹಾಗೂ ರೋಗದ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನೊಂದವರು ಅಳಲು ತೋಡಿಕೊಂಡಿದ್ದಾರೆ. ಹೃದಯ ಸಂಬಂಧಿ ತಪಾಸಣೆ ವರದಿ ಬಗ್ಗೆ ಸೂಕ್ತವಾಗಿ ಪರಿಶೀಲಿಸದೆ ಎಲ್ಲವೂ ಸರಿಯಿದೆ ಎಂದು ಸಾಗಹಾಕಿರುವುದಾಗಿ ಆರೋಪಿಸಿದ್ದಾರೆ.

ಡಯಾಲಿಸಿಸ್ ಯಂತ್ರಗಳನ್ನು ಹೊರತುಪಡಿಸಿ ರಕ್ತ ಪರೀಕ್ಷೆ ಪೂರಕ ವ್ಯವಸ್ಥೆಗಳ‌ ಕೊರತೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕ್ಷೇತ್ರ ಶಾಸಕರು ಗಮನಹರಿಸಲು ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!