ಸನ್ಮಾನ

ವಿ.ಜೆ. ಜಾಯ್ಸ್ ಲೀನಾ ಅವರಿಗೆ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನ

ಕುಶಾಲನಗರ, ಜು 27: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2024–25ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 2ನೇ ರ್‍ಯಾಂಕ್ ವಿಜೇತ ವಿ ಜೆ ಜಾಯ್ಸ್ ಲೀನಾ ಅವರಿಗೆ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ವಿದ್ಯಾರ್ಥಿನಿಯ ಪೋಷಕರಾದ ಜೋಸೆಫ್ ವಂದನಾಥ್ ಹಾಗೂ ತಾಯಿ ಜೋಸೆಫಿನ್ ಅವರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ .ಕೆ ಐ ಪರಿಶಿವಮೂರ್ತಿ
ವಿದ್ಯಾರ್ಥಿಯ ಸಾಧನೆಯನ್ನು ಕುರಿತು ಶ್ಲಾಘಿಸಿದರು. ಕಾಲೇಜಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಹೊಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕಾಗಿದೆ ಎಂದರು. ಸಾಧನೆಯ ಮೂಲಕ ಕಾಲೇಜು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರೋದು ಶ್ಲಾಘನೀಯ ಅಂಶವಾಗಿದೆ ಎಂದು ವಿದ್ಯಾರ್ಥಿನಿಯ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಎಸ್ ಸತೀಶ್ ಮಾತನಾಡಿ, ವಿದ್ಯಾರ್ಥಿನಿಯ ಪರಿಶ್ರಮ ಹಾಗೂ ಕಾಲೇಜಿನಲ್ಲಿ ತರಗತಿಗಳ ಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಯ ಭಾಗವಹಿಸುವಿಕೆ ಮತ್ತು ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಸೀನಪ್ಪ ಕಂಪ್ಯೂಟರ್ ವಿಭಾಗದ ಶಿಕ್ಷಕ ಶ್ರೀನಾಥ್ ಅವರುಗಳು ಮಾತನಾಡಿ ವಿದ್ಯಾರ್ಥಿಯ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಸನ್ಮಾನಿತ ರ್ಯಾಂಕ್ ವಿದ್ಯಾರ್ಥಿನಿ ಜಾಯ್ಸ್ ಲೀನಾ ಮಾತನಾಡಿ, ತನಗೆ ಸಾಧನೆ ಮಾಡಲು ಕಾರಣಕರ್ತರಾದ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವರ್ಗಕ್ಕೆ ಧನ್ಯವಾದ ಸಲ್ಲಿಸಿದರು. ಮುಂದೆ ತಾನು ಉನ್ನತ ಶಿಕ್ಷಣ ಪಡೆಯುವ ಗುರಿ ಹೊಂದಿರುವುದಾಗಿ ಆಶಯ ವ್ಯಕ್ತಪಡಿಸಿದರು.
ಬಡ ಆಟೋ ಚಾಲಕನ ಪುತ್ರಿಯಾಗಿರುವ ಜಾಯ್ಸ್ ಲೀನಾ ಅವರ ಮುಂದಿನ ಉನ್ನತ ವ್ಯಾಸಂಗಕ್ಕೆ ಸಂಘ ಸಂಸ್ಥೆಗಳ ಮೂಲಕ ಸಹಾಯದ ಅವಶ್ಯಕತೆ ಇರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ ನವೀನ್, ಡಾ ರೂಪ, ಡಾ. ಜಗದೀಶ್ ಡಾ.ಪವಿತ್ರ ಮತ್ತು ಬೋಧಕ ಬೋಧಕೇತರ ವರ್ಗ ಹಾಗೂ ಸಿಬ್ಬಂದಿ ವರ್ಗ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!