ಕುಶಾಲನಗರ, ಆ 02: ರೋಟರಿ, ಪ್ರಗತಿ ಮತ್ತು ಪ್ರಥಮ್ ಮೈಸೂರು ಇವರ ಸಹಭಾಗಿತ್ವದಲ್ಲಿ ಇಂಗ್ಲೀಷ್ ಮೇಳ ಕಾರ್ಯಕ್ರಮವನ್ನು ಮಾದಾಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಥಮ್ ಪ್ರತಿಷ್ಠಾನದ ರಾಜ್ಯ ಸಂಪನ್ಮೂಲ ವ್ಯಕ್ತಿ ಮಹದೇವ ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮಹದೇವ ಸ್ವಾಮಿ, ಇಂಗ್ಲೀಷ್ ಇಂದು ಎಲ್ಲರಗೂ ಅಗತ್ಯವಾದ ಭಾಷೆಯಾಗಿದೆ. ಪ್ರಪಂಚದಾದ್ಯಂತ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಬಳಕೆಯಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಇಂಗ್ಲೀಷ್ ಕಲಿಯುವುದು ಅಗತ್ಯವೂ ಆಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲೀಷ್ ಕಷ್ಟಕರವಾದ ವಿಯಷವಾಗಿದೆ. ಸಂತಸದಿಂದ ಕಲಿತರೆ ಇಂಗ್ಲೀಷ್ ಅನ್ನು ಸುಲಲಿತವಾಗಿ ಮಾತನಾಡಬಹುದು. ಅದಕ್ಕಾಗಿಯೇ ಸರ್ಕಾರಿ ಶಾಲಾ ಮಕ್ಕಳಲ್ಲಿ ಇಂಗ್ಲೀಷ್ ಕಲಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಹೇಳಿದರು.
ನಂತರ ಸಹ ಶಿಕ್ಷಕ ಸತ್ಯನಾರಾಯಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ನಿರಂತರ ಅಧ್ಯಯನಶೀಲತೆ ಅತಿಅವಶ್ಯಕವಾಗಿದೆ.
ಇಂಗ್ಲೀಷ್ ಪ್ರತಿಯೊಬ್ಬರಿಗೂ ಅವಶ್ಯಕ. ಶಿಕ್ಷಕರೂ ಕೂಡ ಮುತುವರ್ಜಿಯಿಂದ ಮಕ್ಕಳಲ್ಲಿ ಇಂಗ್ಲೀಷ್ ಜ್ಞಾನವನ್ನು ಮೂಡಿಸಬೇಕು ಎಂದರು.
ನಂತರ ಶಾಲಾ ಮುಖ್ಯಶಿಕ್ಷಕಿ ಗುಲ್ ಶೀರ್ ಬಾನು ಮಾತನಾಡಿ ಮಕ್ಕಳನ್ನ ದೇಶದ ಆಸಿಯನ್ನಾಗಿಸಿ ರೂಪಿಸಬೇಕು. ಅದಕ್ಕೆ ಮುಖ್ಯವಾಗಿ ಶಿಕ್ಷಣಬೇಕು. ಮಕ್ಕಳ ಪೋಷಕರು ತಿಂಗಳಿಗೆ ಒಮ್ಮೆಯದರೂ ಶಾಲೆಗೆ ಭೇಟಿನೀಡಿ ಮಕ್ಕಳ ಕಲಿಕೆಯ ಪ್ರಗತಿಯ ಬಗ್ಗೆ ತಿಳಿದು, ಕಲಿಕೆಯತ್ತ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭ ಎಸ್.ಡಿ.ಎಂ.ಸಿ ಸದಸ್ಯೆ ಆಶಾ, ಶಿಕ್ಷಕರಾದ ಮಾಳವಿಕ, ಜಯಕಲಾ, ರಂಜನಾ, ಸಮತಾ, ದಿವ್ಯ ಶ್ರೀ, ಸುಲ್ತಾನ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಮತ್ತಿತರರು ಹಾಜರಿದ್ದರು.
Back to top button
error: Content is protected !!