ಕುಶಾಲನಗರ, ಜು 02: ಹಾರಂಗಿ ಯೋಜನೆಯಡಿಯಲ್ಲಿ 2022ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ದಿನಾಂಕ 02.08.2022 ಮಂಗಳವಾರದಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ ಹಾಗೂ ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಅಧಿಕಾರಿ ಸದಸ್ಯರ ಉಪಸ್ಥಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ದಿನಾಂಕ 03/08/2022 ರಿಂದ 16/08/2022 ರವರೆಗೆ (15 ದಿನಗಳು) ಹಾರಂಗಿ ಬಲ ಮತ್ತು ಎಡದಂಡೆ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯ ಕೆರೆ-ಕಟ್ಟೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ನೀರನ್ನು ಹರಿಸಲಾಗುವುದು. ತದನಂತರ ನೀರಿನ ಒಳಹರಿವನ್ನು ಗಮನಿಸಿಕೊಂಡು ಕಟ್ಟುಪದ್ಧತಿಯ ಆಧಾರದಲ್ಲಿ ಖಾರೀಫ್ 2022ರ ಬೆಳೆಗಳಿಗಾಗಿ ಮುಖ್ಯ ನಾಲೆಯಲ್ಲಿ ನೀರನ್ನು ಹರಿಸಲಾಗುವುದು ಮತ್ತು ಈ ಬಗ್ಗೆ ಮುಂದುವರೆದ ಪ್ರಕಟಣೆ ಹೊರಡಿಸಲಾಗುವುದು.
ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ಮೇಲ್ಕಂಡ ನೀರು ಬಿಡುವ ವೇಳಾ ಪಟ್ಟಿಯು ಪರಿಷ್ಕರಣೆಗೆ ಒಳಪಟ್ಟಿದ್ದು, ಈ ಸಂಬಂಧ ಉಂಟಾಗಬಹುದಾದ
ಹಾನಿಗೆ ಕಾವೇರಿ ನೀರಾವರಿ ನಿಗಮವು ಜವಾಬ್ದಾರರಾಗುವುದಿಲ್ಲ.
ಹಾರಂಗಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟುದಾರರು ನೀರಾವರಿ ಅಧಿಕಾರಿಗಳೊಡನೆ ಸಹಕರಿಸುವಂತೆ ಮತ್ತು ನೀರು ಹರಿಸುವುದರ ವಿಷಯವಾಗಿ ಕಾವೇರಿ ನೀರಾವರಿ ನಿಗಮವು
ಯಾವುದೇ ರೀತಿಯ ಜವಾಬ್ದಾರರಲ್ಲವೆಂದು
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್, ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿದ್ದಾರೆ.
Back to top button
error: Content is protected !!