ಕುಶಾಲನಗರ, ಜೂ 21: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಟಿ.ಬಿ.ಜಗದೀಶ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರಾದ ಸಿ. .ಕೆ.ಉದಯಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಯಾದ ಹಿನ್ನಲೆಯಲ್ಲಿ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಆಯ್ಕೆ ಹಿನ್ನಲೆಯಲ್ಲಿ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಗೌರಮಣಿ, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್ ಸೇರಿದಂತೆ ಸಂಘದ ನಿರ್ದೇಶಕರಾದ ಕೆ.ಎಸ್.ಕೃಷ್ಣೇಗೌಡ, ಟಿ.ಎ.ರವಿಚಂದ್ರ, ಟಿ.ಜಿ.ರವಿಕುಮಾರ್, ಹೆಚ್.ಸಿ.ಮೂರ್ತಿ, ಹೇಮ, ಸಿ.ಕೆ.ಉದಯಕುಮಾರ್, ಗ್ರಾಪಂ ಸದಸ್ಯೆ ಸಾವಿತ್ರಿ ಗಿರೀಶ್ ಸೇರಿದಂತೆ ಕಾಂಗ್ರೆಸ್ ಪ್ರಮುಖರಾದ ಎಸ್.ಎಸ್.ಚಂದ್ರಶೇಖರ್, ಪಿ.ಡಿ.ರವಿ, ವಿ.ಜೆ.ನವೀನ್ ಗೌಡ, ತೋಟೇಶ್, ರಮೇಶ್, ಗುಂಡಣ್ಣ, ಟಿ.ಎಸ್.ಚಂದ್ರಶೇಖರ್, ಗಣೇಶ್, ವಸಂತಕುಮಾರ್ ಸೇರಿದಂತೆ ಗ್ರಾಮಸ್ಥರು, ಬೆಂಬಲಿಗರು ಇದ್ದರು.
Back to top button
error: Content is protected !!