ಕೂಡಿಗೆ, ಏ. 04: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತದ ಆಡಳಿತ ಮಂಡಳಿಯ 2026-31 ರ ಸಾಲಿನ ಆಡಳಿತ ಮಂಡಳಿಯ ಚುನಾವಣೆಯ ನಿರ್ದೇಶಕರ ಸ್ಥಾನಕ್ಕೆ ಕುಶಾಲನಗರ ತಾಲ್ಲೂಕು ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್. ಆರ್ ಅರುಣ್ ರಾವ್ ರವರು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಸಂಘದ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಆಡಳಿತ ಮಂಡಳಿಗೆ ಕೊಡಗು ಜಿಲ್ಲೆಯ ಪರವಾಗಿ ಒಂದು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಕೊಡಗು ಜಿಲ್ಲೆಯಿಂದ ಮಹಾಮಂಡಳದ ಸದ್ಯಸತ್ವ ಪಡೆದವರಿಗೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತಕ್ಕೆ ರಾಜ್ಯ ಎಂಟು ಜಿಲ್ಲೆಗಳು ಒಳಪಟ್ಟಿರುತ್ತಾವೆ. ಇವುಗಳಲ್ಲಿ ಮತದಾನ ಮಾಡುವ ಹಕ್ಕನ್ನು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಒಟ್ಟು ಎಂಟು ಜಿಲ್ಲೆಯ ಅರ್ಹ 13 ಮಂದಿ ಸದಸ್ಯರು ಮತದಾನದ ಹಕ್ಕನ್ನು ಪಡೆದಿದ್ದು ದಿನಾಂಕ 12 ರಂದು ನಡೆಯುವ ಚುನಾವಣೆಯಲ್ಲಿ ಸದಸ್ಯರು ಮತ ಚಲಾಯಿಸಲಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮತದಾನ ಹಕ್ಕನ್ನು 3 ಸಹಕಾರ ಸಂಘದ ಪ್ರತಿನಿಧಿಗಳು ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿಯಮಿತದ ಅಧ್ಯಕ್ಷ ಬಿ. ಕಾವೇರ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.
Back to top button
error: Content is protected !!