ಕುಶಾಲನಗರ,ಏ 04: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೊಡ್ಡತ್ತೂರಿನ ಎಸ್.ಆರ್. ಪುರುಷೋತ್ತಮ್, ಉಪಾಧ್ಯಕ್ಷರಾಗಿ ಹೆಚ್. ಪುಟ್ಟೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಟ್ಟಡದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಧಾನಕ್ಕೆ ಪುರುಷೋತ್ತಮ್ ಮತ್ತು ಪದ್ಮಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟೆಗೌಡ ಮತ್ತು ಕೆ.ಎಸ್. ಗಿರೀಶ್ ನಾಮಪತ್ರ ಸಲ್ಲಿಸಿದ್ದರು. ಪದ್ಮಾ ಮತ್ತು ಗಿರೀಶ್ ಅವರು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಎಸ್. ಆರ್. ಪುರುಷೋತ್ತಮ್ ಮತ್ತು ಉಪಾಧ್ಯಕ್ಷರಾಗಿ ಪುಟ್ಟೆಗೌಡ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ತಾಲ್ಲೂಕು ಸಹಕಾರ ಇಲಾಖೆಯ ಅಧೀಕ್ಷಕ ಪಿ.ಬಿ ಮೋಹನ್ ಕುಮಾರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಶಿವಾನಂದ ರೈ, ಮಂಜುನಾಥ್ ಕೆ, ರುದ್ರಪ್ಪ, ಸಲೀನಾ, ರಂಜಿತ್ ಎ.ಜೆ, ಪದ್ಮಾ, ಗೌರಮ್ಮ, ಸುರೇಶ್ ಕುಮಾರ್ ಡಿ.ಟಿ, ಬಿಂದಮ್ಮ, ರಮೇಶ್, ಗಿರೀಶ್, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಎಸ್. ಆರ್. ಸುನಿಲ್ ರಾವ್, ಗ್ರಾಮದ ಪ್ರಮುಖರಾದ ರಾಮಣ್ಣ, ಪಾಪಣ್ಣ, ದಿನೇಶ್, ಸುನಿಲ್, ಚೇತನ್, ರಾಮೇಗೌಡ, ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.
ಚುನಾವಣಾ ಪ್ರಕ್ರಿಯೆ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ರಾಮೇಗೌಡ, ಸಹಾಯಕ ಸುನಿಲ್ ಕುಮಾರ್ ಇದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದ ನಂತರ ಗ್ರಾಮಸ್ಥರು, ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.


Back to top button
error: Content is protected !!