ಕುಶಾಲನಗರದ ಕನ್ನಿಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರ ಹೋಮ ಮತ್ತು ವಿಶೇಷ ಪೂಜೆ
ಕುಶಾಲನಗರ, ಜು 30:
ಕುಶಾಲನಗರದ ಕನ್ನಿಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರ ಹೋಮ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಕಳೆದ 16 ವರ್ಷದಿಂದ ರಿಜಿಡ್ ಗ್ರೂಪ್ ವತಿಯಿಂದ ನಡೆಸಿಕೊಂಡು ಬಂದಿರುವ ಪೂಜೋತ್ಸವದಲ್ಲಿ, ಶನಿವಾರ ಶನಿ ಕಥಾ ಶ್ರಾವಣದ ಜೊತೆಗೆ ಮೃತ್ಯುಂಜಯ ಹೋಮ, ನವಗ್ರಹ ಹೋಮ, ಕನ್ನಿಕಪರಮೇಶ್ವರಿ ಹೋಮ ಮತ್ತು ಶನಿದೇವರ ವಿಶೇಷ ಪೂಜೆಯನ್ನು ಅರ್ಚಕ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ನಡೆಸಲಾಯಿತು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಮತ್ತು ಆಡಳಿತ ಮಂಡಳಿಯು ಭಾಗಿಯಾಗಿದ್ದರು.
ರಿಜಿಡ್ ಗ್ರೂಪ್ ನ ಕೆ.ಎಸ್.ನಾಗೇಶ್, ವಿ.ವಿ.ತಿಲಕ್, ಎನ್.ವಿ.ಬಾಬು, ಎ. ಎಸ್.ಕುಮಾರ್, ನಾಗಪ್ರವೀಣ್, ಎ.ವಿ.ಸಂತೋಷ್, ಪಿ.ಕೆ.ರಘು, ವಿ.ಆರ್.ಮಂಜುನಾಥ್, ಎಸ್.ಎಂ. ನಾಗೇಂದ್ರ, ಎಸ್.ಎಸ್.ಮನೋಹರ್, ಗಾಯತ್ರಿ ಬಾಬು, ಶಾಲಿನಿ ನಾಗೇಶ್, ಚಿತ್ರ ರಮೇಶ್ ಇತರರು ಹಾಜರಿದ್ದರು.
Back to top button
error: Content is protected !!