ಕುಶಾಲನಗರ ಕೋಟಿ ಚನ್ನಯ್ಯ ಬಿಲ್ಲವ ಸಂಘದಿಂದ ಮೃತ ಪ್ರವೀಣ್ ನೆಟ್ಟಾರ್ ಗೆ ಶ್ರದ್ದಾಂಜಲಿ
ಕುಶಾಲನಗರ, ಜು 30: ಮೃತ ಪ್ರವೀಣ್ ನೆಟ್ಟಾರ್ ಗೆ ಕುಶಾಲನಗರದಲ್ಲಿ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಕುಶಾಲನಗರ ಕೋಟಿ ಚನ್ನಯ್ಯ ಬಿಲ್ಲವ ಸಂಘದಿಂದ
ಕುಶಾಲನಗರ ಮಹಾಲಕ್ಷ್ಮಿ ರೆಸಿಡೆನ್ಸಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಪ್ರವೀಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನಾಚರಿಸಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಪ್ರವೀಣ್ ಅವರ ಮರಣ ಸಾಮಾನ್ಯವಲ್ಲ. ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದ ಅವರು ಹುತಾತ್ಮರೆಂದೇ ಪರಿಗಣಿಸಬೇಕಿದೆ ಎಂದರು.
ಮಾಜಿ ಸೈನಿಕ ಸುಧೀರ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ಸಮುದಾಯದ ಯುವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಸಂಘದ ಅಧ್ಯಕ್ಷರಾದ ರಮೇಶ್, ಪ್ರಮುಖರಾದ ಸತೀಶ್ ಕುಂದರ್, ಸೋಮಪ್ಪ ವೇದಾವತಿ, ರವಿ, ಗಂಗಾಧರ್ ಮತ್ತಿತರರು ಇದ್ದರು.
Back to top button
error: Content is protected !!