ಕುಶಾಲನಗರ, ಜು 29: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದ ವತಿಯಿಂದ 6.5 ಲಕ್ಷ ರೂ ಹಣವನ್ನು ಒದಗಿಸುವುದಾಗಿ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದರು.
ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಹಾಕುವ ಮೂಲಕ ಸಂಘದ ಬೆಳವಣಿಗೆ ಮತ್ತು ತಮ್ಮ ಅರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಕರೆ ನೀಡಿದರು.
ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಹಾಸನ ಹಾಲು ಒಕ್ಕೂಟದ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಅಲಮೇಲಮ್ಮ ಶಿವಣ್ಣ ವಹಿಸಿದ್ದರು.
ಸಭೆಯಲ್ಲಿ 2022-23 ನೇ ಸಾಲಿನ ಯೋಜನೆ ಬಗ್ಗೆ ಚರ್ಚೆ ನಡೆಯಿತು. ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಡಿ.ಎಸ್.ಸುಮ ವಾಚಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಮಮತ ಚಂದ್ರಶೇಖರ್, ನಿರ್ದೇಶಕರಾದ ಗೌರಮ್ಮ ಜೋಯಪ್ಪ, ಹೊನ್ನಮ್ಮ ಮಹಾಲಿಂಗಚಾರ್, ಲತಾ ವಿಶ್ವನಾಥ್, ಯಶೋಧ ತಮ್ಮಯ್ಯ, ರೇಣುಕಾ ಜಯಣ್ಣ, ಲಕ್ಷ್ಮಮ್ಮ ಮಲ್ಲಿಕಾರ್ಜುನ, ರಾಣಿ ಕೃಷ್ಣ, ಚಂದ್ರಾವತಿ, ಧರ್ಮಪ್ಪ ಸೇರಿದಂತೆ ಕಾರ್ಯದರ್ಶಿ ಸುಮ ಸೇರಿದಂತೆ ಸಂಘದ ಮಹಿಳಾ ಸದಸ್ಯರು ಭಾಗವಹಿಸಿದ್ದರು.
Back to top button
error: Content is protected !!