ಕುಶಾಲನಗರ, ಆ 28 ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಹಳಿಯ ಮೆರವಣಿಗೆ ಭಾನುವಾರ ಸಂಜೆ ಕುಶಾಲನಗರ ತಲುಪಿತು.
ಕೊಡಗಿನ ಗಡಿ ಶಿರಂಗಾಲಕ್ಕೆ ಆಗಮಿಸಿದ ಪ್ರತಿಮೆ ಒಳಗೊಂಡ ರಥವನ್ನು ಕುಶಾಲನಗರದ ಗೌಡ ಸಮುದಾಯದ ಪ್ರಮುಖರು ಬರಮಾಡಿಕೊಂಡರು.
ಶಿರಂಗಾಲದಿಂದ ಕುಶಾಲನಗರದ ವರೆಗೆ ಮೆರವಣಿಗೆ ನಡೆಸಲಾಯಿತು.
ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಕೂರನ ಪ್ರಕಾಶ್, ಉಪಾಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಂ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ ಹೇಮಂತ್, ಕೊಡವ ಸಮಾಜ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಕಾರ್ಯದರ್ಶಿ ಎಂ.ಎಂ.ಪ್ರಕಾಶ್, ಪುತಃಳಿ ಸಮಿತಿಯ ಕಿರಣ್ ಬುಡ್ಲಗದ್ದೆ, ಸಾಹಿತಿ ಅನಂತಗೌಡ ಸೇರಿದಂತೆ ಗೌಡ ಯುವಕ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು.
Back to top button
error: Content is protected !!