ಕುಶಾಲನಗರ, ಏ 14: ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮಾತನಾಡಿ, ಡಾ.ಅಂಬೇಡ್ಕರ್ ಮಾನವಯತೆಯ ಮೇರು ದೀಪ.
ಇವರು ಬರೆದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದುದು.
ಇದರಿಂದಾಗಿ ಅದೆಷ್ಟೋ ಬಡ ಹಾಗೂ ನಿರ್ಗತಿಕ ಮಂದಿಯ ಬದುಕು ಬೆಳಕಾಗಿದೆ.
ದೇವಾಲಯಗಳಿಗೆ ಹೋಗಿ ಸಾಲಾಗಿ ನಿಲ್ಲುವ ನಮ್ಮ ಜನ ಗ್ರಂಥಾಲಯಗಳ ಮುಂದೆ ಸಾಲಾಗಿ ನಿಂತಾಗ ನಾನು ಬರೆದ ಸಂವಿಧಾನಕ್ಕೆ ಇನ್ನಷ್ಟು ಹೊಳಪು ಸಿಗುತ್ತದೆ.
ಮಂದಿಯ ಬದುಕು ಮತ್ತಷ್ಟು ಹಸನಾಗುತ್ತದೆ ಎಂದು ಹೇಳಿದ ಸಂವಿಧಾನ ಶಿಲ್ಪಿಯ ಹೇಳಿಕೆಯನ್ನು ಡಾ.ದೀಪಿಕಾ ಈ ಸಂದರ್ಭ ಉಲ್ಲೇಖಿಸಿದರು.
ಆಸ್ಪತ್ರೆಯ ಆರೋಗ್ಯ ಸುರಕ್ಷತಾ ಅಧಿಕಾರಿ ಶಕೀನಾ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮುಖೇಶ್, ಚಂದ್ರೇಶ್, ಪ್ರಯೋಗ ಶಾಲಾ ತಂತ್ರಜ್ಞರಾದ ಶುಭ, ಸಿಬ್ಬಂದಿ ಮಂಜುನಾಥ ಇದ್ದರು.
Back to top button
error: Content is protected !!