ಟ್ರೆಂಡಿಂಗ್ಪ್ರತಿಭಟನೆ

ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ‌ ಗ್ರಾಮಸ್ಥರ‌ ಮುತ್ತಿಗೆ:

ಕುಶಾಲನಗರ, ಡಿ 19: ಕುಶಾಲನಗರ ತಾಲ್ಲೂಕಿ‌ನ ತೊರೆನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಮಂಗಳೂರು ವಿವಿಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಕೇಂದ್ರದ ಪ್ರವೇಶ ದ್ವಾರದಲ್ಲಿ‌ ಸೋಮವಾರ ಪ್ರತಿಭಟನೆ ನಡೆಸಿದರು.

ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ.ಬೇಬಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹಣ ಪಡೆದು ಉದ್ಯೋಗ ಹಂಚಿಕೆ‌‌ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸ್ಥಳೀಯವಾಗಿ ಸ್ನಾತಕೋತ್ತರ ಪದವಿಗಳನ್ನು ಪಡೆದ ನೂರಾರು ಮಂದಿ ನಿರುದ್ಯೋಗಿ ಯುವಕ ಯುವತಿಯರಿದ್ದು ಅವರಿಗೆ ಉದ್ಯೋಗಾವಕಾಶದಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಕೆ.ಕೆ. ಧರ್ಮಪ್ಪ, ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಯಾರಿಂದಲೂ ಹಣ ಪಡೆದು ಉದ್ಯೋಗ ನೀಡಿರುವುದಿಲ್ಲ ಎಂದರು.
ಸ್ಥಳೀಯರ ಅಹವಾಲು ಹಾಗು ಅಭಿಪ್ರಾಯಗಳನ್ನು ಮಂಗಳೂರು ವಿವಿ ಉಪ ಕುಲಪತಿಗಳ ಗಮನಕ್ಕೆ ತರಲಾಗುವುದು ಎಂದು ಧರ್ಮಪ್ಪ ತಿಳಿಸಿದರು.
ಪ್ರತಿಭಟನೆಯಲ್ಲಿ ಪಂಚಾಯಿತಿ ಸದಸ್ಯರಾದ ಶೋಭಪ್ರಕಾಶ್, ಶಿವಕುಮಾರ್, ತೀರ್ಥಾನಂದ, ಮಾಜಿ ಸದಸ್ಯ ಟಿ.ಎಲ್.ಮಹೇಶ್, ಚಿಕ್ಕ ಅಳುವಾರ ದೇವಾಲಯ ಸಮಿತಿಯ ಎ.ಕೆ. ಸುಂದರ, ಪ್ರಮುಖರಾದ ಅರ್ಜುನ್, ಎ.ಎಸ್.ಮಹೇಶ್, ಜನಾರ್ಧನ, ಮಂಜು, ಉದಯಕುಮಾರ್, ದಿನೇಶ್, ಸುಗು, ಚಿಕ್ಕಯ್ಯ, ಬಾಲಪ್ಪ, ಗಣೇಶ್, ನಿರಂಜನ ಮೊದಲಾದವರಿದ್ದರು.
ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್ ಬಂದೋಬಸ್ತ್ ವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!