ಕುಶಾಲನಗರ, ಏ 12: ಕನ್ನಡ ಸೇರಿದಂತೆ ಹಲವು ಭಾಷೆಯ ಚಲನಚಿತ್ರ, ಕಿರು ಚಿತ್ರಗಳಲ್ಲಿ ನಟಿಸಿದ್ದ ಕೊಡಗಿನ ಕಲಾವಿದ 7ನೇ ಹೊಸಕೋಟೆಯ ಕಲ್ಲೂರಿನ ಹರೀಶ್ (42) ಅಪಘಾತದಲ್ಲಿ ನಿಧನರಾದರು.
ಕಲ್ಲೂರಿನ ಮನೆಗೆ ಕಾರಿನಲ್ಲಿ ರಾತ್ರಿ ತೆರಳುತ್ತಿದ್ದ ಸಂದರ್ಭ ಆನೆಕಾಡಿನ ಹೆದ್ದಾರಿಯಲ್ಲಿ ರಿಪೇರಿಯಾಗಿ ನಿಂತಿದ್ದ ಗೊಬ್ಬರ ತುಂಬಿದ್ದ ಲಾರಿಗೆ ಹಿಂದಿನಿಂದ ವ್ಯಾಗನಾರ್ ಕಾರು ಡಿಕ್ಕಿಯಾಗಿ ಹರೀಶ್ ಸ್ಥಳದಲ್ಲೇ ಮೃತರಾದರು. ಕುಶಾಲನಗರ ಭಾಗದಲ್ಲಿ ಹರೀಶ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಹರೀಶ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!