ಕುಶಾಲನಗರ, ಮಾ 24: (ಕುಶಲವಾಣಿನ್ಯೂಸ್) ಚಿಕ್ಕಮಗಳೂರಿನಲ್ಲಿ ನಡೆದ ಸ್ಬಿಮಿಂಗ್ ಪೂಲ್ ದುರಂತದಲ್ಲಿ ಘಾಸಿಗೊಂಡಿದ್ದ ಕುಶಾಲನಗರದ ಮೊಬೈಲ್ ಶಾಪ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ನಡೆದಿದೆ.
ಕುಶಾಲನಗರದ ಮೊಬೈಲ್ ಗ್ಯಾಲೆರಿ ಮಾಲೀಕ ನಿಶಾಂತ್ (35) ಮೃತ ದುರ್ದೈವಿ.ಪ್ರವಾಸಕ್ಕೆಂದು 10 ಮಂದಿ ಬೈಕರ್ಸ್ ತಂಡದೊಂದಿಗೆ ಚಿಕ್ಕಮಗಳೂರಿಗೆ ತೆರಳಿದ್ದಾಗ ಹೋಂ ಸ್ಟೇ ಒಂದರಲ್ಲಿ ಶನಿವಾರ ಈ ಘಟನೆ ನಡೆದಿದೆ.
ಈಜಲು 4.5 ಅಡಿ ಆಳದ ಸ್ವಿಮಿಂಗ್ ಪೂಲ್ ಗೆ ಧುಮುಕಿದಾಗ ಸ್ಪೈನಲ್ ಕಾರ್ಡ್ ಗೆ ಘಾಸಿ ಉಂಟಾಗಿದೆ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎನಪೋಯ ಗೆ ದಾಖಲಿಸಲಾಗಿತ್ತು. ವೈದ್ಯರಿಂದ ಸಕಾರಾತ್ಮಕ ಸ್ಪಂದನೆ ದೊರೆಯದೆ ಕಾರಣ ಆಸ್ಪತ್ರೆ ಯಿಂದ ಕುಶಾಲನಗರಕ್ಕೆ ರವಾನಿಸುವ ಮಾರ್ಗ ಮಧ್ಯೆ ನಿಶಾಂತ್ ಭಾನುವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
Back to top button
error: Content is protected !!