ಕುಶಾಲನಗರ, ಮಾ 05: ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿಯ ಸುರಬೀಲ್ (26) ಎಂಬಾತ ದಿನಾಂಕ: 04-03-2025 ರಂದು ಮಡಿಕೇರಿಯ ಜಿಲ್ಲಾ ಕಾರಗೃಹದಲ್ಲಿರುವ ವಿಚಾರಣಾ ಬಂಧಿಯಾದ ಸನಮ್ ಎಂಬಾತನ ಸಹೋದರನೆಂದು ಹೇಳಿಕೊಂಡು ಸಂದರ್ಶನಕ್ಕಾಗಿ ಕಾರಗೃಹಕ್ಕೆ ಬಂದಿದ್ದು, ವಿಚಾರಣಾ ಬಂಧಿ ಸನಮ್ ಗೆ ದಿನ ನಿತ್ಯದ ಸಾಮಗ್ರಿಗಳಾದ ಟೂತ್ ಪೇಸ್ಟ್, ಟೂತ್ ಬ್ರಶ್, ಮೆಡಿಮಿಕ್ಸ್ ಸೋಪ್, ಡಾಕ್ಟರ್ ವಾತ್ ಬಟ್ಟೆ ಸೋಪ್, ನವರತ್ನ ಆಯಿಲ್ ಮತ್ತು ಕಾರ್ತಿಕ ಶ್ಯಾಂಪ್ ಗಳನ್ನು ತಂದಿದ್ದು, ಸದರಿ ಸಾಮಾಗ್ರಿಗಳನ್ನು ವಿಚಾರಣಾ ಬಂಧಿ ಸನಮ್ ಗೆ ನೀಡುವ ಮೊದಲು ಜಿಲ್ಲಾ ಕಾರಗೃಹ ಅಧೀಕ್ಷಕ ಸಂಜಯ್ ಜತ್ತಿ ಅವರು ಪರೀಶಿಲಿಸುವ ಸಂದರ್ಭ ಟೂತ್ ಪೇಸ್ಟ್ ಟ್ಯೂಬ್‌ನ ಒಳಗೆ ಪೇಸ್ಟ್‌ನ ಬದಲಿಗೆ ಕಪ್ಪು ಬಣ್ಣದ ಅಮಲು ಪದಾರ್ಥವನ್ನು ತುಂಬಿ ತಂದಿರುವುದು ಕಂಡುಬಂದಿದೆ. ಸದರಿ ಸಾಮಾಗ್ರಿಗಳನ್ನು ತಂದಿದ್ದ ಸುರಬೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸ್ವೀಕರಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b)(ii)(A) ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಿ: 04-03-2025 ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
Back to top button
error: Content is protected !!