ಕುಶಾಲನಗರ, ಫೆ 18: ಕೂಡಿಗೆಯ ಅಂಜೆಲಾ ವಿದ್ಯಾನಿಕೇತನ ಶಾಲೆ ವತಿಯಿಂದ
ಸಂವಿಧಾನ ಮೌಲ್ಯವನ್ನು ಪ್ರಚಾರ ಮಾಡುವ
ಬೀದಿನಾಟಕ ಹಾಗೂ ಜಾಥವನ್ನು ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಸಾಮಾಜಿಕ ಸೌಹಾರ್ದತೆ ಉತ್ತೇಜಿಸುವುದು ಮತ್ತು ಜನರಲ್ಲಿ ಸಹೋದರತ್ವದ ಮಹತ್ವವನ್ನು ಮನವರಿಕೆ ಮಾಡಿಸುವುದು,
ವಿದ್ಯಾರ್ಥಿಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸಹೋದರತ್ವದ ಅಗತ್ಯವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ನಾಟಕವನ್ನು ಪ್ರಸ್ತುತಪಡಿಸಲಾಯಿತು.
ನಾಟಕದಲ್ಲಿ ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಸಮನ್ವಯದಿಂದ ದೇಶದಲ್ಲಿ ಬಾಂಧವ್ಯ ಮತ್ತು ಸಹಕಾರ ಹೇಗೆ ಬೆಳೆಯಬೇಕು ಎಂಬ ಸಂದೇಶವನ್ನು ವೀಕ್ಷಕರಿಗೆ ತಲುಪಿಸಲಾಯಿತು.
“ಸಹೋದರತ್ವವೇ ನಮ್ಮ ಶಕ್ತಿ,” “ಸಾಮರಸ್ಯದ ಮೂಲಕ ಸಮೃದ್ಧ ಭಾರತ” ಮುಂತಾದ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಸಾಂವಿಧಾನಿಕ ಮೌಲ್ಯಗಳ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಎಷ್ಟು ಮುಖ್ಯವೆಂಬುದನ್ನು ನೆನಪಿಸಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಅನಿತಾ ಡಯಾಸ್, ಸಹ ಶಿಕ್ಷಕರಾದ ಸಿಸ್ಟರ್ ರೇಖಾ, ಫರ್ನಾಂಡಿಸ್, ಹರೀಶ್, ಐ.ಬಿ.ರೇಖಾ, ವಸಂತ್, ಜೋಷಿಣಿ, ಲತಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!