ಕುಶಾಲನಗರ, ಫೆ 18:ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರ ಖಂಡನೀಯ ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆ (MAS-ರಿ) ರಾಜ್ಯ ಸಮಿತಿಯು ಘೋಷಿಸಿದೆ. ಈ ನಿರ್ಧಾರವು ಕೊಡಗಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಷ್ಟಗೊಳಿಸುವಂತಾಗಿದ್ದು, ತಕ್ಷಣವೇ ಹಿಂಪಡೆಯಬೇಕೆಂದು ಸಮಿತಿ ಆಗ್ರಹಿಸಿದೆ.
ವಿದ್ಯಾರ್ಥಿಗಳಿಗೆ ದೀರ್ಘ ದೂರದ ಪ್ರಯಾಣದ ಅನಿವಾರ್ಯತೆ
ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇಲ್ಲದ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ 90-110 ಕಿ.ಮೀ. ದೂರದ ಮೈಸೂರು ಅಥವಾ 180-210 ಕಿ.ಮೀ. ದೂರದ ಮಂಗಳೂರಿಗೆ ತೆರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವುದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಆರ್ಥಿಕ ಹಿಂಡೆತ ಎದುರಿಸಬೇಕಾಗುತ್ತದೆ ಎಂದು MAS(ರಿ) ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.
ಸರ್ಕಾರ ತಕ್ಷಣ ನಿರ್ಧಾರ ಹಿಂಪಡೆಯಲಿ
“ಒಂದು ವಿಶ್ವವಿದ್ಯಾಲಯ ಕೊಡಗಿನ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರದ ಈ ಕ್ರಮ ಕೊಡಗಿನ ಪ್ರತಿ ನಾಗರಿಕನಿಗೂ ಅನ್ಯಾಯ ತರುವಂತಾಗಿದೆ. ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆದು, ವಿಶ್ವವಿದ್ಯಾಲಯವನ್ನು ಉಳಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಂತೆ ಆಗ್ರಹಿಸುತ್ತೇವೆ,” ಎಂದು ಮೂಲ ನಿವಾಸಿ ಅಂಬೇಡ್ಕರ್ ಸೇನೆ (MAS-ರಿ) ರಾಜ್ಯ ಸಮಿತಿ ಸದಸ್ಯ ಝೈನುಲ್ ಆಬಿದ್.ಕೆ.ಎ. ಕುಶಾಲನಗರ ರವರು ಹೇಳಿದ್ದಾರೆ.
ನಾಗರಿಕರ ಒಗ್ಗಟ್ಟಿಗೆ ಕರೆ
ಕೊಡಗು ವಿಶ್ವವಿದ್ಯಾಲಯವನ್ನು ಉಳಿಸುವ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕನೂ ಒಂದಾಗಬೇಕಾಗಿದೆ. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ, ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದುMAS(ರಿ) ರಾಜ್ಯ ಸಮಿತಿಯು ಒತ್ತಾಯಿಸಿದೆ.
Back to top button
error: Content is protected !!