ಕುಶಾಲನಗರ, ಫೆ 17: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ದಿನಾಂಕ 30-01-2025 ರಿಂದ SV SMART VISION ಎಂಬ ಹೆಸರಿನಲ್ಲಿ ಮಡಿಕೇರಿ ನಗರ ನಿವಾಸಿಗಳಾದ ಅಶ್ರಫ್, ಸುಲೈಮಾನ್, ಅಬ್ದುಲ್ ಗಫೂರ್, ಆಕ್ರಮ್ ಹಾಗೂ ಕಿಶೋರ್ ಎಂಬುವರು ಹಣವನ್ನು ಸಂಗ್ರಹಿಸುತ್ತಿದ್ದು, ಸದರಿ ಸ್ಕಿಮ್ನಲ್ಲಿ ಈಗಾಗಲೇ 1100 ಕ್ಕೂ ಹೆಚ್ಚು ಜನರು ಸೇರಿರುತ್ತಾರೆ.
ಸದರಿ ಸ್ಕೀಂ ಗೆ ಸೇರಲು ಒಬ್ಬರೂ ಪ್ರತಿ ತಿಂಗಳು ರೂ. 1,000/- ರಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30 ನೇ ತಾರೀಕಿನಂದು ಸಂಜೆ 05 ಘಂಟೆಗೆ ರಾಣಿಪೇಟೆಯಲ್ಲಿರುವ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸ್ ಆಪ್ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ತಿಳಿಸಿರುತ್ತಾರೆ.
ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಫಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿದ್ದು, ಫಾರ್ ಜೀಪ್ ಬದಲಾಗಿ ರೂ.7,60,000/- ಗಳು ಮತ್ತು 07 ಜನರಿಗೆ ರೂ. 43,000/- ಗಳ ಚೆಕ್ ಅನ್ನು ನೀಡಿರುತ್ತಾರೆ.
SV SMART VISION ರವರು ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಸ್ಟೀಮ್ನ ಪ್ರತಿನಿಧಿಗಳಾದ ಅಶ್ರನ್, ಸುಲೈಮಾನ್, ಅಬ್ದುಲ್ ಗಫೂರ್, ಅಕ್ರಮ್ ಹಾಗೂ ಕಿಶೋರ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು DA, : 21(1)(2) BUDS Act & 318(4), 3(5), BNS-2023 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಸೂರಜ್ ಪಿ.ಎ, ಡಿಎಪಿ, ಮಡಿಕೇರಿ ಉಪವಿಭಾಗ, ರಾಜು.ಪಿ.ಕೆ. ಮಡಿಕೇರಿ ನಗರ ವೃತ್ತ, ಶ್ರೀಧರ.ಸಿ.ಎ. ಪಿಎಸ್‌ಐ, & ರಾಧ, ಪಿಎಸ್‌ಐ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ದಿನಾಂಕ: 15-02-2025 ರಂದು 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1) ಮಹಮ್ಮದ್ ಆಶ್ರಫ್, 37 ವರ್ಷ, ಸೂರತ್ಕಲ್, ಕೃಷ್ಣಪುರ, 6 ನೇ ಬ್ಲಾಕ್, ಮಂಗಳೂರು.
2) ಸುಲೈಮಾನ್ ಎಂ.ವೈ. 37 ವರ್ಷ, ಮಲ್ಲಿಕಾರ್ಜುನ ನಗರ, ಮಡಿಕೇರಿ.
3) ಅಬ್ದುಲ್ ಗಫೂರ್, 34 ವರ್ಷ, ತ್ಯಾಗರಾಜ ಕಾಲೋನಿ, ಮಡಿಕೇರಿ,
4) ಮೊಹಮ್ಮದ್ ಅಕ್ರಂ, 34 ವರ್ಷ, ತ್ಯಾಗರಾಜ ಕಾಲೋನಿ, ಮಡಿಕೇರಿ.
5) ಕಿಶೋರ್ ಹೆಚ್.ಎನ್. 41 ವರ್ಷ, ಕುಂಬಳಕೇರಿ ಉಕ್ಕುಡ, ಮಡಿಕೇರಿ
SV SMART VISION ಎಂಬ ಹೆಸರಿನ ಸ್ವೀಮ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಸೂಕ್ತ ದಾಖಲಾತಿಗಳೊಂದಿಗೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಕೋರಿದೆ.