ಕುಶಾಲನಗರ, ಫೆ 01:ದಿನಾಂಕ: 27-01-2025 ರಂದು ಸಂಜೆ ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದ ಆರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಸುರಜ್.ಪಿ.ಎ. ಡಿಎಪಿ. ಮಡಿಕೇರಿ ಉಪವಿಭಾಗ, ಶ್ರೀ ಚಂದ್ರಶೇಖರ್ .ಹೆಚ್ .ವಿ. ಪಿಐ & ಶ್ರೀ ಶ್ರೀನಿವಾಸ, ಪಿಎಸ್‌ಐ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ & ಶ್ರೀ ಎನ್.ಟಿ.ತಮ್ಮಯ್ಯ, ಪಿಎಸ್ ಐ, ಮಡಿಕೇರಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತನಿಖಾ ತಂಡವು ತನಿಖೆ ಕೈಗೊಂಡು ದಿನಾಂಕ: 01-02-2025 ರಂದು ಹಲ್ಲೆ ಮಾಡಿರುವ ಆರೋಪಿಗಳಾದ 1) ಎಂ.ಬಿ.ಅಯ್ಯಪ್ಪ @ ಅನಿಲ, 46 ವರ್ಷ, ನಾಲ್ಕೇರಿ ಗ್ರಾಮ, ವಿರಾಜಪೇಟೆ, 2) ಎಂ.ಪಿ.ಕಾಳಪ್ಪ, 51 ವರ್ಷ, ನಾಲ್ಕೇರಿ ಗ್ರಾಮ, ವಿರಾಜಪೇಟೆ & 3) ಟಿ.ಎಲ್.ಸುಬ್ಬಯ್ಯ @ ಸುನಿ, 47 ವರ್ಷ, ನಾಲ್ಕೇರಿ ಗ್ರಾಮ ವಿರಾಜಪೇಟೆ ಎಂಬುವವರನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Back to top button
error: Content is protected !!