ಶಿಕ್ಷಣ

ಹೆಬ್ಬಾಲೆ ಶಾಲೆಯಲ್ಲಿ ಇಂಗ್ಲಿಷ್ ಮೇಳ

ಕುಶಾಲನಗರ, ಜ 22: ಕುಶಾಲನಗರ ತಾಲೂಕು ಹೆಬ್ಬಾಲೆಯಲ್ಲಿ ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಮೈಸೂರು. ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ (ಇಂಗ್ಲಿಷ್) ಆಂಗ್ಲ ಭಾಷೆ ಮೇಳವನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದ ಅಧ್ಯಕ್ಷತೆ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಪ್ರದೀಪ್ ಕುಮಾರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂಡಿಗೆ ಡಯಟ್ ನ ಉಪನ್ಯಾಸಕ ವಿಜಯ್ ಭಾಗವಹಿಸಿ ಆಂಗ್ಲ ಭಾಷೆಯ ಮಹತ್ವವನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಹೆಬ್ಬಾಲೆ ಪ್ರೌಢಶಾಲೆಯ ಆಂಗ್ಲ ಭಾಷೆ ಉಪನ್ಯಾಸಕ ಅನಂತ್. ನಿವೃತ್ತ ಶಿಕ್ಷಕರಾದ ರಮೇಶ. ಉಪಾಧ್ಯಕ್ಷೆ ಅರ್ಪಿತ.ಸಹಶಿಕ್ಷಕಿ ಜಾನಕಿ. ಡಯಟ್ ನ ಟೆಕ್ನಿಕಲ್ ಸಹಾಯಕ ಹರೀಶ್ ಮುಖ್ಯ ಶಿಕ್ಷಕರಾದ ವೆಂಕಟೇಶ ಹಳೆಕೋಟೆ ಶಾಲೆಯ ಮುಖ್ಯ ಶಿಕ್ಷಕ ಟಿ.ಆರ್. ರಮೇಶ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಥಮ್ ಸಂಸ್ಥೆಯ ಶಿಕ್ಷಕಿ ರಂಜಿತ ಕಾರ್ಯಕ್ರಮದ ರೂಪುರೇಷೆ ಯನ್ನು ವಿವರಿಸಿದರು.
ಶಿಕ್ಷಕಿ ಶ್ರೀಮತಿ ರಮ್ಯಾ ಅವರು ಸರ್ವರನ್ನು ಸ್ವಾಗತಿಸಿದರು
ದಿನದ ಮಹತ್ವವನ್ನು ಕುರಿತು ಡಯಟ್ ಉಪನ್ಯಾಸಕರಾದ ವಿಜಯ್ ತಿಳಿಸಿದರು ಕೊನೆಯಲ್ಲಿ ಶಿಕ್ಷಕಿ ಪುಷ್ಪಾವತಿಯವರು ಸರ್ವರನ್ನು ವಂದಿಸಿದರು.
ನಂತರ ಸಭಾಂಗಣದಲ್ಲಿ ಇಂಗ್ಲಿಷ್ ಮೇಳದಲ್ಲಿ ಅನೇಕ ವಿಷಯಗಳ ಬಗ್ಗೆ ಮಕ್ಕಳು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶನವನ್ನು ನೀಡಿದರು ಈ ಸಂದರ್ಭ ಪೋಷಕರು ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಶಾಲೆಯ ಮಕ್ಕಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!